ಕರ್ನಾಟಕ

karnataka

ETV Bharat / state

ತನಿಖೆಯ ನಂತರ ಡ್ರಗ್ಸ್​ ದಂಧೆಯ ನಂಟು ಹೊರಬೀಳಲಿದೆ: ಕೃಷಿ ಸಚಿವ ಬಿ.ಸಿ. ಪಾಟೀಲ್ - Zameer Ahmed

ಡ್ರಗ್ಸ್ ದಂಧೆಯ ಹಿಂದೆ ಭೂಗತ ಲೋಕದ ನಂಟಿದೆಯಾ, ಟೆರರಿಸ್ಟ್ ಇದ್ದಾರಾ? ಎಂಬುದರ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ಡ್ರಗ್ಸ್ ಯುವ ಜನಾಂಗದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಈವರೆಗೆ ಯಾವುದೇ ಸರ್ಕಾರಗಳು ಇದರ ನಿರ್ಮೂಲನೆ‌ ಮಾಡಲಿಲ್ಲ. ಆದರೆ ಬಿಜೆಪಿ ಸರ್ಕಾರ ಡ್ರಗ್ಸ್ ನಿರ್ಮೂಲನೆಗೆ ಮುಂದಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

B.C. Patil
ಕೃಷಿ ಸಚಿವ ಬಿ.ಸಿ. ಪಾಟೀಲ್

By

Published : Sep 11, 2020, 2:12 PM IST

ಕೊಪ್ಪಳ: ಡ್ರಗ್ಸ್ ದಂಧೆ ಕುರಿತಂತೆ ಈಗ ದೀರ್ಘವಾಗಿ ತನಿಖೆ ನಡೆಯುತ್ತಿದ್ದು, ಈ ದಂಧೆಗೆ ಯಾವುದರೊಂದಿಗೆ ನಂಟಿದೆ ಎಂಬುದರ ಬಗ್ಗೆ ತನಿಖೆ ಬಳಿಕ ಗೊತ್ತಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಮಾತನಾಡಿದ ಅವರು, ಡ್ರಗ್ಸ್ ದಂಧೆಯ ಹಿಂದೆ ಭೂಗತ ಲೋಕದ ನಂಟಿದೆಯಾ, ಟೆರರಿಸ್ಟ್ ಇದ್ದಾರಾ ಎಂಬುದರ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ಡ್ರಗ್ಸ್ ಯುವ ಜನಾಂಗದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಈವರೆಗಿನ ಯಾವ ಸರ್ಕಾರಗಳು ಇದರ ನಿರ್ಮೂಲನೆ‌ ಮಾಡಲಿಲ್ಲ. ಆದರೆ ಬಿಜೆಪಿ ಸರ್ಕಾರ ಡ್ರಗ್ಸ್ ನಿರ್ಮೂಲನೆಗೆ ಮುಂದಾಗಿದೆ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ್

ಈ ಪ್ರಕರಣ ಕುರಿತು ಈಗ ತನಿಖೆ ನಡೆಯುತ್ತಿದ್ದು, ತನಿಖಾ ಹಂತದಲ್ಲಿ ನಾನು ಏನಾದರೂ ಹೇಳಿದರೆ ಅದು ತಪ್ಪಾಗುತ್ತದೆ. ನಾನೂ ಸಹ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಕಾಲದಲ್ಲಿ ಇಂತಹದ್ದನ್ನು ನೋಡಿಲ್ಲ. ಚಿತ್ರರಂಗದವರು ಅಂದರೆ ಗಾಜಿನ‌ಮನೆಯಲ್ಲಿದ್ದಂತೆ. ಅಭಿಮಾನಿಗಳು, ಅನುಕರಿಸುವವರು ಇರುತ್ತಾರೆ. ಹೀಗಾಗಿ ಸಿನಿಮಾದಲ್ಲಿ ಇರುವವರು ಮಾದರಿಯಾಗಬೇಕು ಎಂದು ಸಚಿವ ಬಿ ಸಿ ಪಾಟೀಲ್​ ಹೇಳಿದ್ರು.

ಇನ್ನು ಡ್ರಗ್ಸ್ ದಂಧೆಯಲ್ಲಿ ಜಮೀರ್ ಅಹ್ಮದ್ ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಯಾರ ಹೆಸರು ಬಂದರೂ ಯಾರನ್ನೂ ಬಿಡುವುದಿಲ್ಲ. ಅದು ಚಿತ್ರರಂಗವಿರಬಹುದು, ರಾಜಕೀಯ ರಂಗವಿರಬಹುದು‌. ಇನ್ನು ಗಾಂಜಾ ಬೆಳೆಯುವುದನ್ನು ಲೀಗಲೈಜ್ ಮಾಡುವುದು ತಪ್ಪು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಕೃಷಿ ಪದವಿ ಪರೀಕ್ಷೆ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಡಿದ ಮತ್ತು ಕೃಷಿ ಪದವಿ ಸೀಟ್ ಕೊಡುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ಕೋಡಿಹಳ್ಳಿ ಚಂದ್ರಶೇಖರ್ ಅವರ ಬಗ್ಗೆ ನನಗೆ ಗೌರವವಿತ್ತು. ಕೃಷಿ ಪದವಿ ಪ್ರವೇಶ ಸೀಟ್ ಮೆರಿಟ್ ಮೇಲೆ ದೊರೆಯುತ್ತದೆ. ರೈತರ ಮಕ್ಕಳಿಗೆ 40 ರಷ್ಟು ಸೀಟ್ ಸಿಗುತ್ತವೆ. ಸೀಟ್ ನೀಡುವ ಅಧಿಕಾರ ಸಚಿವ, ಸಿಎಂ ಗೂ ಇಲ್ಲ. ಕೋಡಿಹಳ್ಳಿ ಅವರು ಅಷ್ಟೊಂದು ಅಜ್ಞಾನ ಹೊಂದಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ. ನಮ್ಮ ಮುತ್ತಾತನ ಕಾಲದಿಂದಲೂ ನಾವು ರೈತರು. ರೈತರಿಗಾಗಿ ನಾನು ಹಿಂಡಲಗಾ ಜೈಲಿಗೆ ಹೋಗಿ ಬಂದಿದ್ದೇನೆ. ನಾನು ರೈತನಾಗಿ, ಪೊಲೀಸ್ ಅಧಿಕಾರಿಯಾಗಿ, ಚಲನಚಿತ್ರ ನಟನಾಗಿ ಬಳಿಕ ರಾಜಕೀಯಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details