ಕೊಪ್ಪಳ: ಸಭೆಯೊಂದರಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಸಚಿವ ಹಾಲಪ್ಪ ಆಚಾರ್ ವೈಯಕ್ತಿಕ ಜೀವನ ಕುರಿತು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿರುವ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ವೇಳೆ ಸಚಿವರ ವೈಯಕ್ತಿಕ ಜೀವನ ಕುರಿತು ಅಪಹಾಸ್ಯ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಸಚಿವ ಹಾಲಪ್ಪ ಆಚಾರ್ ವೈಯಕ್ತಿಕ ಜೀವನ ಕುರಿತು ಬಸವರಾಜ ರಾಯರೆಡ್ಡಿ ಅಪಹಾಸ್ಯ ಭಾಷಣ ಮಾಡುವ ಸಂದರ್ಭದಲ್ಲಿ ‘ಆರು ಹಡದಾಕಿ ಮುಂದೆ ಮೂರು ಹಡದಾಕಿ ಚಮಕ್ ಮಾಡಿದ್ಲಂತೆ, ಆರು ಹಡದಾಕಿ ಸುಮ್ಮನೆ ಕುಂತಕೊಂಡೀನಿ' ಎಂದು ರಾಯರೆಡ್ಡಿ ಹೇಳಿದಾಗ ಆಗ ಎದುರಿಗಿದ್ದ ಜನರು ಮೂರು ಹಡದಾಕಿ..? ಎಂದು ಪ್ರಶ್ನಿಸಿದರು. ಆಗ ಒಂದೂನೂ ಇಲ್ಲೋ ಎಂದು ಪರೋಕ್ಷವಾಗಿ ಸಚಿವ ಹಾಲಪ್ಪ ಆಚಾರ್ಗೆ ಮಕ್ಕಳಿಲ್ಲ ಎಂದು ರಾಯರೆಡ್ಡಿ ಅಪಹಾಸ್ಯ ಮಾಡಿದ್ದರು.
ಈ ವಿಡಿಯೋ ಹರಿದಾಡಿದ ಬಳಿಕ ಹಾಲಪ್ಪ ಆಚಾರ್ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದು, ಮಾಜಿ ಸಚಿವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ನಾನು 1985ನಲ್ಲಿ ಶಾಸಕನಾಗಿದ್ದೆ, ಅಂದರೆ ಮಾಜಿ ಸಿಎಂ ಸಿದ್ದರಾಮಯ್ಯ, ದೇಶಪಾಂಡೆ ಅವರ ಸಮಕಾಲೀನ. ನಾನು ಸಂಸದನಾಗಿ 26 ವರ್ಷ ಕಳೆದಿದೆ ಎಂದಿದ್ದಾರೆ.