ಕೊಪ್ಪಳ:ಏಕಸ್ ಕಂಪನಿಯ ಆಟಿಕೆ ವಸ್ತು ತಯಾರಿಕಾ ಘಟಕದ ಭೂಮಿ ಪೂಜೆಕಾರ್ಯಕ್ರಮಕ್ಕೆ ಕರೆದು, ಸಭೆಯಲ್ಲಿ ಮಾತನಾಡಿ ಎಂದು ಹೇಳಿದವರು ಅವರೇ. ನಂತರ ಯಾವಾನೋ ಬಂದು ನೀವು ಮಾತನಾಡಬೇಡಿ ಅಬ್ಜಕ್ಷನ್ ಆಗುತ್ತೆ ಎಂದು ಹೇಳಿದರೆ ಏನರ್ಥ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಸಮಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಕರೆದು ಅವಮಾನಿಸುವುದು ಸರಿಯೇ: ಬಸವರಾಜ ರಾಯರೆಡ್ಡಿ ಅಸಮಾಧಾನ - koppala basavaraya reddy news
ಕೊಪ್ಪಳದ ಏಕಸ್ ಕಂಪನಿಯ ಆಟಿಕೆ ವಸ್ತು ತಯಾರಿಕಾ ಘಟಕದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ನನ್ನನ್ನು ಕರೆದು ಅವಮಾನಿಸಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
![ಕಾರ್ಯಕ್ರಮಕ್ಕೆ ಕರೆದು ಅವಮಾನಿಸುವುದು ಸರಿಯೇ: ಬಸವರಾಜ ರಾಯರೆಡ್ಡಿ ಅಸಮಾಧಾನ basavaraja-raireddy-is-upset-news](https://etvbharatimages.akamaized.net/etvbharat/prod-images/768-512-10181145-thumbnail-3x2-reddy.jpg)
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಏಕಸ್ ಕಂಪನಿಯ ಆಟಿಕೆ ವಸ್ತು ತಯಾರಿಕಾ ಘಟಕದ ಭೂಮಿಪೂಜೆ ಕಾರ್ಯಕ್ರಮಕ್ಕೆ ಕಂಪನಿಯವರು ನನಗೂ ಆಹ್ವಾನ ನೀಡಿದ್ದರು. ವೇದಿಕೆಯಲ್ಲಿ ನೀವು ಮಾತನಾಡಿ ಎಂದು ಮೊದಲು ಹೇಳಿದರು. ಬಳಿಕ ಯಾವನೋ ಬಂದು ನೀವು ಮಾತನಾಡಿದರೆ ಸಭೆಯಲ್ಲಿ ಅಬ್ಜೆಕ್ಷನ್ ಆಗುತ್ತೆ ಎಂದು ಹೇಳಿದ.
ನಾನೇನು ಮಾತನಾಡುತ್ತೇನೆ ಎಂದು ಹೇಳಿದ್ದೆನಾ? ನಾನು ಮಾತನಾಡಿದರೆ ಅಬ್ಜಕ್ಷನ್ ಆಗುತ್ತೆ ಎಂದು ಹೇಳಿದವರು ಯಾರು ಹೇಳು ಅಂತ ನಾನು ಕೇಳಿದೆ. ಸಮಯವಿಲ್ಲ ಮಾತನಾಡುವುದು ಬೇಡ ಎಂದರೆ ಸರಿ. ಆದರೆ, ಕರೆಸಿ ಮಾತನಾಡಿದರೆ ಅಬ್ಜಕ್ಷನ್ ಆಗುತ್ತೆ ಎಂದು ಹೇಳೋದು ಸರಿನಾ? ಅಲ್ಲಿ ಏನು ನಡೆಯುತ್ತಿದೆ ಎಂದು ಸಿಎಂ ಅವರಿಗೆ ಗೊತ್ತಿರಲಿಲ್ಲ. ಏನಾಯ್ತು ಎಂಬುದು ಅವರಿಗೆ ಆನಂತರ ಮನವರಿಕೆ ಆಯಿತು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.