ಗಂಗಾವತಿ: ತಾಲೂಕಿನ ಶ್ರೀರಾಮನಗರದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಸಮೀಪ ಎರಡು ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಶಾಸಕ ಬಸವರಾಜ ದಡೇಸುಗೂರು ಚಾಲನೆ ನೀಡಿದರು.
2 ಕೋಟಿ ರೂ.ವೆಚ್ಚದ ಕಾಮಗಾರಿಗೆ ಶಾಸಕ ಬಸವರಾಜ ದಡೇಸುಗೂರು ಚಾಲನೆ - ಗಂಗಾವತಿಯಲ್ಲಿ 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ
ಗಂಗಾವತಿ ತಾಲೂಕಿನ ಶ್ರೀರಾಮನಗರದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಸಮೀಪ ಎರಡು ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಶಾಸಕ ಬಸವರಾಜ ದಡೇಸುಗೂರು ಚಾಲನೆ ನೀಡಿದರು.
![2 ಕೋಟಿ ರೂ.ವೆಚ್ಚದ ಕಾಮಗಾರಿಗೆ ಶಾಸಕ ಬಸವರಾಜ ದಡೇಸುಗೂರು ಚಾಲನೆ Gangavathi](https://etvbharatimages.akamaized.net/etvbharat/prod-images/768-512-11:49-kn-gvt-02-14-mla-laidfoundetion-for-2cr-progressive-works-pic-kac10005-14062020075920-1406f-1592101760-770.jpg)
Gangavathi
1.40 ಕೋಟಿ ರೂ. ಮೊತ್ತದಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, 8.80 ಲಕ್ಷ ಮೊತ್ತದಲ್ಲಿ ಬೋರ್‌ವೆಲ್ ಕೊರೆಯಿಸುವುದು, ಪೈಪ್ ಲೈನ್ ಅಳವಡಿಕೆ, 44 ಲಕ್ಷ ಮೊತ್ತದಲ್ಲಿ ಸುತ್ತು ಗೋಡೆ ಪೂರ್ಣಗೊಳಿಸುವ ಕೆಲಸ ಪ್ರಾರಂಭವಾಗಿದೆ.
ಈ ವೇಳೆ ಮಾತನಾಡಿದ ಅವರು, ಗಂಗಾವತಿ ಎಪಿಎಂಸಿ ಎರಡು ಭಾಗವಾಗಿದೆ. ನನ್ನ ಕ್ಷೇತ್ರವಲ್ಲದಿದ್ದರೂ ಸಹ ಗಂಗಾವತಿ ಎಪಿಎಂಸಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.