ಗಂಗಾವತಿ(ಕೊಪ್ಪಳ):ಅನಾಥ ಮತ್ತು ಬಿಡಾಡಿ ಜಾನುವಾರುಗಳ ಸಂರಕ್ಷಣೆಯ ತಾಣವಾಗಿರುವ ತಾಲ್ಲೂಕಿನ ಆನೆಗೊಂದಿ ಬಳಿಯ ದುರ್ಗಾಬೆಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಸಿಎಂ ನಿಗದಿತ ಕಾರ್ಯಕ್ರಮದ ಪಟ್ಟಿಯಲ್ಲಿ ಗೋಶಾಲೆ ಭೇಟಿ ಇರದಿದ್ದರೂ ಅಲ್ಲಿಗೆ ತೆರಳಿ ಅಚ್ಚರಿ ಮೂಡಿಸಿದರು.
ಈ ಸಂದರ್ಭದಲ್ಲಿ ಗೋಶಾಲೆಯ ಗೋವೊಂದಕ್ಕೆ ಮುತ್ತಿಟ್ಟು ಪೂಜೆ ಸಲ್ಲಿಸಿದ ಬೊಮ್ಮಾಯಿ, ಗೋ ಗ್ರಾಸ ನೀಡಿ ಕಾಣಿಕೆ ತಲುಪಿಸಿದರು. ಗೋಶಾಲೆಯಲ್ಲಿನ ಸುಮಾರು ಐನೂರಕ್ಕೂ ಹೆಚ್ಚು ಹಸುಗಳನ್ನು ಸಂರಕ್ಷಣೆ ಮಾಡಲಾಗುತ್ತಿದ್ದು, ನಿರ್ವಹಣೆಯೇ ಸವಾಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಸಿಎಂ ಗಮನಕ್ಕೆ ತಂದರು.