ಗಂಗಾವತಿ: ಬಸವ ಜಯಂತಿ, ಅಕ್ಷಯ ತೃತೀಯ ಎಂದರೆ ಈ ಹಿಂದೆ ಏನೆಲ್ಲಾ ಸಂಭ್ರಮ ಇರುತ್ತಿತ್ತು. ಅಕ್ಷಯ ತೃತೀಯದಂದು ನಗರದ ಬಹುತೇಕ ಬಂಗಾರದ ಅಂಗಡಿಗಳು ಹೌಸ್ಫುಲ್ ಆಗಿರುತ್ತಿದ್ದವು. ಆದರೆ ಈಗ ನಗರದ ಎಲ್ಲಾ ಅಂಗಡಿಗಳು ಬಾಗಿಲು ಹಾಕಿದ್ದು ಬೀಕೊ ಎನ್ನುವಂತೆ ಕಾಣುತ್ತಿದೆ.
ಅಕ್ಷಯ ತೃತೀಯ: ಕೊಳ್ಳಲು ಗ್ರಾಹಕರಿಲ್ಲ, ಮಾರಲು ವರ್ತಕರಿಲ್ಲ! - ಗಂಗಾವತಿ
ಪ್ರತಿ ವರ್ಷದ ಅಕ್ಷಯ ತೃತೀಯದಂದು ಬಹುತೇಕ ಬಂಗಾದ ಅಂಗಡಿಗಳು ಜನರಿಂದ ತುಂಬಿರುತ್ತಿದ್ದವು. ಆದರೆ ಈ ಬಾರಿ ಕೊರೊನಾ ಎಫೆಕ್ಟ್ನಿಂದಾಗಿ ಎಲ್ಲಾ ಅಂಗಡಿಗಳು ಬಾಗಿಲು ಹಾಕಿದ್ದು ಬೀಕೊ ಎನ್ನುವಂತೆ ಕಾಣುತ್ತಿದೆ.
ಅಕ್ಷಯ ತೃತೀಯ: ಕೊಳ್ಳಲು ಗ್ರಾಹಕರಿಲ್ಲ, ಮಾರಲು ವರ್ತಕರಿಲ್ಲ
ಅಕ್ಷಯ ತೃತೀಯದಂದು ಒಂದು ಗ್ರಾಂನಷ್ಟು ಬಂಗರವಾದರೂ ಕೊಳ್ಳಬೇಕು. ಇದರಿಂದ ಭವಿಷ್ಯತ್ತಿನಲ್ಲಿ ಸಿರಿ ಸಂಪತ್ತು ವೃದ್ಧಿಸಿ ಬಂಗಾರ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇರುವ ಕಾರಣಕ್ಕೆ ಪ್ರತಿ ವರ್ಷದ ಅಕ್ಷಯ ತೃತೀಯದಂದು ಬಹುತೇಕ ಬಂಗಾದ ಅಂಗಡಿಗಳು ಫುಲ್ ಆಗಿರುತ್ತಿದ್ದವು.
ಆದರೆ ಈ ಬಾರಿಯ ಕೊರೊನಾ ಎಫೆಕ್ಟ್ ಹಾಗೂ ಲಾಕ್ಡೌನ್ನಿಂದಾಗಿ ಕಳೆದ ಒಂದು ತಿಂಗಳಿಂದ ಬಹುತೇಕ ಬಂಗಾರದ ಅಂಗಡಿಗಳು ಬಂದ್ ಆಗಿವೆ. ಹೀಗಾಗಿ ಬಂಗಾರ ಖರೀದಿಗೆ ಗ್ರಾಹಕರೂ ಒಲವು ತೋರದಿರುವುದು ಕಂಡು ಬಂತು.