ಗಂಗಾವತಿ (ಕೊಪ್ಪಳ):ತಾಲೂಕಿನ ಸಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನದುರ್ಗಾ (ಕೊರಮ್ಮ ಕ್ಯಾಂಪ್)ದಲ್ಲಿರುವ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸ್ಥಾಪಿತವಾಗಿರುವ ಹೇಳಲಾಗುವ ಕುದುರೆಕಲ್ಲು ಹುಲಿಗೆಮ್ಮ ಜಾತ್ರೆ ನಿಮಿತ್ತ ವಿಶೇಷ ಆಚರಣೆಗಳು ನಡೆದವು.
ದೇಗುಲದ ಮುಂದೆ ಒಲೆ ಉರಿಸಿ ಅಕ್ಕಿಪಾಯಸ ಮಾಡುವುದು, ಕುದಿಯುವ ಪಾತ್ರೆಯೊಳಗೆ ಬರಿಗೈ ಇಡುವ ಪೂಜಾರಿ, ಅನ್ನ ತೆಗೆದು ನೈವೇದ್ಯ ಪೂಜೆ ನೆರವೇರಿಸುವ ಮತ್ತು ಅಗ್ನಿಕುಂಡ ಹಾಯುವ.. ಹೀಗೆ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.