ಕೊಪ್ಪಳ:ನಗರದ ಕೋಟೆ ಆಂಜನೇಯ ದೇವಸ್ಥಾನಕ್ಕೆ ಟಿಕೆಟ್ ಆಕಾಂಕ್ಷಿಯ ಬ್ಯಾನರ್ ಕಟ್ಟಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಚುನಾವಣಾ ಅಧಿಕಾರಿ, ಪ್ಲೈಯಿಂಗ್ ಸ್ಕ್ವ್ಯಾಡ್ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬರುತ್ತಿದ್ದಂತೆ ಬ್ಯಾನರ್ ಕಟ್ಟಿದ್ದವರು ಬ್ಯಾನರ್ ಬಿಚ್ಚಿದಂತಹ ಘಟನೆ ನಡೆದಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ. ರಾಜಶೇಖರ್ ಹಿಟ್ನಾಳ್ ಭಾವಚಿತ್ರ ಹಾಗೂ ಪೇಜಾವರ ಶ್ರೀಗಳ ಭಾವಚಿತ್ರವಿದ್ದ ಬ್ಯಾನರ್ನ್ನು ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿದ್ದರು. ಕೆ. ರಾಜಶೇಖರ ಹಿಟ್ನಾಳ್ಗೆಟಿಕೆಟ್ ಸಿಗಲಿ ಎಂದು ಕೋಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಕಟ್ಟಿದ್ದರು. ಇನ್ನುಬ್ಯಾನರ್ ಕಟ್ಟಿದ್ದಕ್ಕೆ ಸ್ಥಳೀಯರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಭೇಟಿ ನೀಡಿದ ಚುನಾವಣಾಧಿಕಾರಿ ಅಕ್ಷಯ್ ಶ್ರೀಧರ್ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡರು. ಅಲ್ಲದೆ, ಬ್ಯಾನರ್ ವಶಪಡಿಸಿಕೊಂಡಿದ್ದಾರೆ.