ಗಂಗಾವತಿ(ಕೊಪ್ಪಳ): ಇಲ್ಲಿನ ಓಲ್ಡ್ ಒಎಸ್ಬಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಗ್ರಾಹಕರು ದೈಹಿಕ ಅಂತರವಿಲ್ಲದೆ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವಂತಾಗಿದೆ.
ಬ್ಯಾಂಕ್ ಎದುರು ದೈಹಿಕ ಅಂತರ ಮರೆತ ಗ್ರಾಹಕರು - Physical distance
ವೀರ ಸಾವರ್ಕರ್ ವೃತ್ತದಲ್ಲಿರುವ ಕಟ್ಟಡದ ಮೇಲ್ಮಹಡಿಯಲ್ಲಿ ಬ್ಯಾಂಕಿನ ಕಚೇರಿಯಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ವ್ಯವಹಾರಕ್ಕಾಗಿ ಆಗಮಿಸಿದ್ದಾರೆ. ಆದರೆ ಬ್ಯಾಂಕಿಗೆ ಹೋಗಲು ಕಿರಿದಾದ ಮಾರ್ಗವಿದ್ದು, ಕಚೇರಿಯೊಳಗೆ ಸಾಕಷ್ಟು ಜಾಗ ಇರದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಗಂಟೆಗಟ್ಟಲೆ ಹೊರಗಡೆ ನಿಲ್ಲಿಸುತ್ತಿದ್ದಾರೆ.
ವೀರ ಸಾವರ್ಕರ್ ವೃತ್ತದಲ್ಲಿರುವ ಕಟ್ಟಡದ ಮೇಲ್ಮಹಡಿಯಲ್ಲಿ ಬ್ಯಾಂಕಿನ ಕಚೇರಿಯಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ವ್ಯವಹಾರಕ್ಕಾಗಿ ಆಗಮಿಸಿದ್ದಾರೆ. ಆದರೆ ಬ್ಯಾಂಕಿಗೆ ಹೋಗಲು ಕಿರಿದಾದ ಮಾರ್ಗವಿದ್ದು, ಕಚೇರಿಯೊಳಗೆ ಸಾಕಷ್ಟು ಜಾಗ ಇರದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಗಂಟೆಗಟ್ಟಲೆ ಹೊರಗೆ ನಿಲ್ಲಿಸುತ್ತಿದ್ದಾರೆ ಎನ್ನಲಾಗಿದೆ.
ಆದರೆ ಸರತಿ ಸಾಲಲ್ಲಿ ನಿಲ್ಲುತ್ತಿರುವ ಜನರಿಗೆ ಯಾವುದೇ ಸೌಲಭ್ಯ ನೀಡಲಾಗುತ್ತಿಲ್ಲ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ಕುಡಿಯುವ ನೀರನ್ನೂ ಸಹ ನೀಡಿಲ್ಲ. ಅಲ್ಲದೆ ದೈಹಿಕ ಅಂತರ ಸಹ ಕಾಪಾಡುವಂತೆ ಗ್ರಾಹಕರಿಗೆ ತಿಳಿಸುವ ಕಾರ್ಯಕ್ಕೂ ಬ್ಯಾಂಕ್ ಸಿಬ್ಬಂದಿ ಮುಂದಾಗಿಲ್ಲವಂತೆ. ಈ ಕುರಿತಂತೆ ಬ್ಯಾಂಕ್ ಗ್ರಾಹಕರು ಅಸಮಾಧಾನ ಹೊರ ಹಾಕಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿದ್ದಾರೆ.