ಕೊಪ್ಪಳ: ಶನಿವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ಕಷ್ಟಪಟ್ಟು ಬೆಳೆದ ಬಾಳೆ ಗಿಡಗಳು ನೆಲಕ್ಕುರುಳಿದ್ದು ರೈತ ಕಣ್ಣೀರಿಡುವಂತಾಗಿದೆ.
ಬಿರುಗಾಳಿ ಮಳೆಗೆ ರೈತನ ಬಾಳೆ ತೋಟ ಸಂಪೂರ್ಣ ನಾಶ - ಬಿರುಗಾಳಿಗೆ ನೆಲಕ್ಕುರುಳಿದ ಬಾಳೆ ಗಿಡ
ಕೊಪ್ಪಳ ತಾಲೂಕಿನ ವಿವಿಧೆಡೆ ಶನಿವಾರ ರಾತ್ರಿ ಮಳೆಯಾಗಿದ್ದು, ಬಿರುಗಾಳಿಯಿಂದ ಬೆಳೆ ಹಾನಿಯಾಗಿ ರೈತರಿಗೆ ಅಪಾರ ನಷ್ಟವಾಗಿದೆ.
![ಬಿರುಗಾಳಿ ಮಳೆಗೆ ರೈತನ ಬಾಳೆ ತೋಟ ಸಂಪೂರ್ಣ ನಾಶ Banana Plants destroyed due to Storm in Koppal](https://etvbharatimages.akamaized.net/etvbharat/prod-images/768-512-11693213-thumbnail-3x2-hrs.jpg)
ನಾಶವಾದ ಬಾಳೆತೋಡ
ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮಲ್ಲಿಕಾರ್ಜುನಗೌಡ ಎಂಬವರು ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನಾಶವಾಗಿವೆ.
ನಾಶವಾದ ಬಾಳೆತೋಟ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತ ಬಾಳೆ ಗಿಡ ಹಾಕಿದ್ದು, ಇದೀಗ ಗಾಳಿ, ಮಳೆ ಆಹುತಿ ಪಡೆದಿದೆ.