ಕರ್ನಾಟಕ

karnataka

ETV Bharat / state

ಬಕ್ರೀದ್ ಹಬ್ಬ ಹಿನ್ನೆಲೆ.. ಕುಷ್ಟಗಿಯಲ್ಲಿ ಶಾಂತಿ ಪಾಲನಾ ಸಭೆ - Koppal News

ಅಗಸ್ಟ್​ 1ರಂದು ಬಕ್ರೀದ್ ಹಬ್ಬ ಹಿನ್ನೆಲೆ ಕುಷ್ಟಗಿ ಪೊಲೀಸ್​ ಠಾಣೆ ಆವರಣದಲ್ಲಿ ಶಾಂತಿ ಪಾಲನಾ ಸಭೆ ನಡೆಸಲಾಯಿತು.

Bakreid festival background: Peace keeping  Meeting  In kushtagi
ಬಕ್ರೀದ್ ಹಬ್ಬ ಹಿನ್ನೆಲೆ: ಕುಷ್ಟಗಿಯಲ್ಲಿ ಶಾಂತಿ ಪಾಲನಾ ಸಭೆ

By

Published : Jul 20, 2020, 8:32 PM IST

ಕುಷ್ಟಗಿ (ಕೊಪ್ಪಳ) :ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಈ ಬಾರಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸೋಣ ಎಂದು ಕುಷ್ಟಗಿ ಪೊಲೀಸ್​ ಠಾಣೆಯ ಪಿಎಸ್​ಐ ಚಿತ್ತರಂಜನ್ ನಾಯಕ್ ತಿಳಿಸಿದ್ದಾರೆ.

ಬಕ್ರೀದ್ ಹಬ್ಬ ಹಿನ್ನೆಲೆ.. ಕುಷ್ಟಗಿಯಲ್ಲಿ ಶಾಂತಿ ಪಾಲನಾ ಸಭೆ

ಅಗಸ್ಟ್​ 1ರಂದು ಬಕ್ರೀದ್ ಹಬ್ಬ ಹಿನ್ನೆಲೆ ಕುಷ್ಟಗಿ ಪೊಲೀಸ್​ ಠಾಣೆ ಆವರಣದಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು. ನಮ್ಮವರೊಬ್ಬರು ಕೋವಿಡ್ ಸೋಂಕಿನಿಂದ ಆಸ್ಪತ್ರೆಯಲ್ಲಿದ್ದಾಗ ಯಾರಿಗೆ ಸಮಾಧಾನವಿರುತ್ತದೆ. ಇಂತಹ ಸಂದರ್ಭದಲ್ಲಿ ಅದ್ದೂರಿಯಾಗಿ ಹಬ್ಬ ಆಚರಿಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಈ ಬಾರಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸೋಣ.

ಬಕ್ರೀದ್ ವೇಳೆ ಇತರರಿಗೆ ಕಿರಿಕಿರಿಯಾಗದಂತೆ ನಿಗಾವಹಿಸಿ. ಇದಕ್ಕೆ ಪೊಲೀಸರ ಸಹಕಾರ ಯಾವತ್ತಿಗೂ ಇರುತ್ತದೆ ಎಂದರು.

ABOUT THE AUTHOR

...view details