ಕರ್ನಾಟಕ

karnataka

ETV Bharat / state

ನಿರ್ಮಾಣ ಮಾಡಿ 45 ದಿನಕ್ಕೇ ಬಹದ್ದೂರ​ಬಂಡಿ ಕೆರೆ ತಡೆಗೊಡೆ ಕುಸಿತ - ಈಟಿವಿ ಭಾರತ ಕನ್ನಡ

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ದಿನದಂದು ಲೋಕಾರ್ಪಣೆಗೊಳಿಸಿದ ಬಹದ್ದೂರಬಂಡಿ ಕೆರೆಯ ತಡೆಗೊಡೆ ಕುಸಿದಿದ್ದು, ಕಳಪೆ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

KN_KPL_01_01_TAD
ಬಹದ್ದೂರಬಂಡಿ ಕೆರೆ

By

Published : Oct 1, 2022, 8:33 PM IST

ಕೊಪ್ಪಳ: ಕೊಪ್ಪಳ ತಾಲೂಕಿನ ಬಹದ್ದೂರು ಬಂಡಿ ಗ್ರಾಮದ ಕೆರೆಯ ತಡೆಗೋಡೆಯೊಂದು ನಿರ್ಮಿಸಿದ 45 ದಿನಗಳಲ್ಲಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಲೋಕಾರ್ಪಣೆಗೊಂಡು ಕೆಲವೇ ದಿನಗಳಲ್ಲಿ ತಡೆಗೋಡೆ ಕುಸಿತ

ಕೇಂದ್ರ ಸರ್ಕಾರದ ಅಮೃತ ಯೋಜನೆ ಅಡಿ 42 ಲಕ್ಷ ರೂಪಾಯಿ ವ್ಯಹಿಸಿ ಬಹುದ್ದೂರಬಂಡಿ ಕೆರೆಯ ತಡೆಗೋಡೆ ನಿರ್ಮಾಣಮಾಡಿ, 75ನೇ ಸ್ವಾತಂತ್ರೋತ್ಸ ಅಮೃತ ಮಹೋತ್ಸವದಂದು ಲೋಕಾರ್ಪಣೆ ಮಾಡಲಾಗಿತ್ತು. ಲೋಕಾರ್ಪಣೆಗೊಂಡು 45 ದಿನ ಕಳೆಯುವುದರೊಳಗೆ ನಿನ್ನೆ ಸುರಿದ ಬಾರಿ ಮಳೆಗೆ ತಡೆಗೋಡೆ ಕುಸಿದಿದ್ದು, ಕಳಪೆ ಕಾಮಗಾರಿ ನಡೆದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆರೆಯ ಪಕ್ಕದಲ್ಲಿ ನೂರಾರು ವರ್ಷಗಳ ಹಿಂದೆ ಕಟ್ಟಿದ ಬಹದ್ದೂರ ಬಂಡಿ ಕೋಟೆ ಕಟ್ಟಡ ಗಟ್ಟಿಯಾಗಿದೆ. ಆದರೆ, 45 ದಿನದ ಹಿಂದೆಯಷ್ಟೆ ಕಟ್ಟಿದ ತಡೆಗೋಡೆ ಮಾತ್ರ ಒಂದೇ ಮಳೆಗೆ ಕಿತ್ತುಹೋಗಿದೆ ಇದು ಕಳಪೆ ಕಾಮಗಾರಿಯಲ್ಲದೇ ಮತ್ತಿನ್ನೇನು ಎಂದು ಕಾಮಗಾರಿ ನಡೆಸಿದವರನ್ನ ಪ್ರಶ್ನಿಸಿದ ಬಹದ್ದೂರ ಬಂಡಿ ಗ್ರಾಮಸ್ಥರು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ನಿರ್ಮಾಣ ಮಾಡಿ ಒಂದೇ ತಿಂಗಳಿಗೆ ಹದಗೆಟ್ಟ ಅಥಣಿ ರಸ್ತೆ... ಜನರ ಆಕ್ರೋಶ

ABOUT THE AUTHOR

...view details