ಕರ್ನಾಟಕ

karnataka

ETV Bharat / state

ಬದು ನಿರ್ಮಾಣ ಮಾಸಾಚರಣೆ ಅಭಿಯಾನಕ್ಕೆ ಅಮರೇಗೌಡ ಪಾಟೀಲ ಬಯ್ಯಾಪೂರ ಚಾಲನೆ - Koppala news

ಪ್ರತಿ ಕುಟುಂಬಕ್ಕೂ ಕೆಲಸ, ಪ್ರತಿ ಜಮೀನಿಗೂ ಬದು ನಿರ್ಮಾಣ ಮಾಸಾಚರಣೆ ಅಭಿಯಾನಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಚಾಲನೆ ನೀಡಿದರು.

ಬದು ನಿರ್ಮಾಣ ಮಾಸಾಚರಣೆ ಅಭಿಯಾನ
ಬದು ನಿರ್ಮಾಣ ಮಾಸಾಚರಣೆ ಅಭಿಯಾನ

By

Published : May 19, 2020, 1:01 PM IST

ಕೊಪ್ಪಳ (ಕುಷ್ಟಗಿ ): ಪ್ರತಿ ಕುಟುಂಬಕ್ಕೂ ಕೆಲಸ, ಪ್ರತಿ ಜಮೀನಿಗೂ ಬದು ನಿರ್ಮಾಣ ಉದ್ದೇಶದಿಂದ ತಾಲೂಕಿನ ಕಿಲ್ಲಾರಹಟ್ಟಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬದು ನಿರ್ಮಾಣ ಮಾಸಾಚರಣೆ ಅಭಿಯಾನಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಚಾಲನೆ ನೀಡಿದರು.

ಮೇ 19 ರಿಂದ ಜೂನ್​ 19ವರೆಗೆ ಸಣ್ಣ, ಅತಿಸಣ್ಣ, ಎಸ್​ಸಿ, ಎಸ್​ಟಿ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡುವಮಾಸಾಚರಣೆ ಅಭಿಯಾನ ಇದಾಗಿದೆ.

ಈ ವೇಳೆ ಮಾತನಾಡಿದ ಅವರು, ಕೂಲಿಕಾರರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ನರೇಗಾ ಯೋಜನೆ ಸಹಾಯಕ ನಿರ್ದೇಶಕ ಅರುಣ ಕುಮಾರ ದಳವಾಯಿ ಪ್ರತಿಕ್ರಿಸಿ, ಮೇ 19 ರಿಂದ ಜೂ.19ರವರೆಗೆ ಬದು ನಿರ್ಮಾಣ ಮಾಸಾಚಾರಣೆ ತಾಲೂಕಿನಾದ್ಯಂತ 36 ಗ್ರಾ.ಪಂ. ವ್ಯಾಪ್ತಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಸಣ್ಣ, ಅತಿಸಣ್ಣ, ಎಸ್​ಸಿ, ಎಸ್​ಟಿ ರೈತರ 5 ಎಕರೆ ಜಮೀನಿನಲ್ಲಿ 10ಸಾವಿರ ರೂ. ಮಿತಿಯೊಳಗೆ ಬದು ನಿರ್ಮಿಸಲು ಅವಕಾಶವಿದೆ ಎಂದರು.

ABOUT THE AUTHOR

...view details