ಕರ್ನಾಟಕ

karnataka

ETV Bharat / state

ಎಫ್ಐಆರ್ ಬೆನ್ನಲ್ಲೆ ಪ್ರತ್ಯಕ್ಷರಾದ ಅಂಜನಾದ್ರಿ ಬಾಬಾ: ಡಿಸಿ ವಿರುದ್ಧ ವಾಗ್ದಾಳಿ - ಅಂಜನಾದ್ರಿ ಬೆಟ್ಟದ ಬಾಬಾ ಡಿಸಿ ವಿರುದ್ಧ ವಾಗ್ದಾಳಿ

ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ಅಂಜನಾದ್ರಿ ಬೆಟ್ಟದ ಮಾಜಿ ಅರ್ಚಕ ಮಹಾಂತ ವಿದ್ಯಾ ದಾಸಬಾಬಾ ಇದೀಗ ಫೇಸ್​​ಬುಕ್​ ಲೈವ್​​ನಲ್ಲಿ ಕಾಣಿಸಿಕೊಂಡಿದ್ದು, ಡಿಸಿ ವಿರುದ್ಧ ಕಿಡಿಕಾರಿದ್ದಾರೆ.

ಅಂಜನಾದ್ರಿ ಬೆಟ್ಟದ ಬಾಬಾ
ಅಂಜನಾದ್ರಿ ಬೆಟ್ಟದ ಬಾಬಾ

By

Published : Jan 21, 2020, 5:56 PM IST

ಗಂಗಾವತಿ: ಕೊಪ್ಪಳ ಜಿಲ್ಲಾಧಿಕಾರಿಯನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ, ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ ಅವರು ಬಾಬಾ ವಿರುದ್ಧ ದೂರು ದಾಖಲಿಸಿದ ಬೆನ್ನಲ್ಲೇ, ಮತ್ತೀಗ ಬಾಬಾ ಫೇಸ್ ಬುಕ್​ ಲೈವ್​​ಗೆ ಬಂದು ಜಿಲ್ಲಾಧಿಕಾರಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಡಿಸಿ ವಿರುದ್ಧ ಫೇಸ್​​ಬುಕ್​ ಲೈವ್​​ನಲ್ಲಿ ಬಾಬಾ ಕಿಡಿಕಾರಿದ್ದಾರೆ

ಕೊಪ್ಪಳ ಡಿಸಿಯನ್ನು ನಿಂದಿಸಿದ ಆರೋಪ: ಮಾಜಿ ಅರ್ಚಕನ ವಿರುದ್ಧ ಎಫ್ಐಆರ್

ಗೂಂಡಾ ಪ್ರವೃತ್ತಿಯುಳ್ಳವರನ್ನು ಗೂಂಡಾ ಎನ್ನದೇ ಮತ್ತಿನ್ನೇನು ಅನ್ನಬೇಕು? ಜಿಲ್ಲಾಧಿಕಾರಿ ಜನರ ಸೇವೆಗೆ ಜಿಲ್ಲೆಗೆ ಬಂದಿಲ್ಲ. ರಾಜಕೀಯ ಪ್ರೇರಿತ ಅಧಿಕಾರ ನಡೆಸುತ್ತಿದ್ದಾರೆ. ಅಂಜನಾದ್ರಿ ದೇಗುಲದಲ್ಲಿ 2ಕಿಲೋ ಬಂಗಾರ, ಅಪಾರ ಪ್ರಮಾಣದ ಬೆಳ್ಳಿ, ಕೋಟ್ಯಂತರ ರೂ. ಹಣ ಇತ್ತು. ಈಗ ಅಧಿಕಾರಿಗಳು ಏನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಾಗುತ್ತಿದೆ ಎಂದು ಬಾಬಾ ಸುಮಾರು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ವಿವಾದಕ್ಕೂ ಕಾರಣರಾಗಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಏನು ಕ್ರಮ ಕೈಗೊಳ್ಳೂತ್ತಾರೋ ಕಾದು ನೋಡಬೇಕಿದೆ.

ABOUT THE AUTHOR

...view details