ಕುಷ್ಟಗಿ (ಕೊಪ್ಪಳ):ಸಾಹಿತಿ ಬಿ. ಶೇಖರಪ್ಪ ಹೂಲಗೇರಿ(80) ಅವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.
ಶಿಕ್ಷಕರಾಗಿ ಶೈಕ್ಷಣಿಕ ಸೇವೆ ಸಲ್ಲಿಸಿದ್ದ ಅವರು ರಾಷ್ಟ್ರಪತಿ ಪುರಸ್ಕೃತ ಉತ್ತಮ ಶಿಕ್ಷಕರೆನ್ನುವ ಗೌರವಕ್ಕೆ ಭಾಜನರಾಗಿದ್ದರು. ಸಾಹಿತಿಯಾಗಿ ರಾಯಚೂರು ಸುದ್ದಿಮೂಲ ಪತ್ರಿಕೆಯ ಅಂಕಣಕಾರರಾಗಿ ಗುರುತಿಸಿಕೊಂಡಿದ್ದರು.
ತಾಲೂಕಿನ ತಾವರಗೇರಾದಲ್ಲಿ ಫೆ. 5, 2010ರಲ್ಲಿ ನಡೆದ ನಾಲ್ಕನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಬಿ. ಶೇಖರಪ್ಪ ಹೂಲಗೇರಿ ಅವರು ಮಕ್ಕಳ ಸಾಹಿತಿ ಎನ್ನುವ ಖ್ಯಾತಿ ಪಡೆದಿದ್ದರು. ಅವರು, ಮಹಾಂತಪ್ರಿಯ ಕಾವ್ಯನಾಮದಿಂದ ಕವಿತೆ, ವಚನಗಳನ್ನು ರಚಿಸಿದ್ದರು.
ಇದನ್ನೂ ಓದಿ:4 ದಿನಗಳಿಂದ ಮರದಲ್ಲೇ ಬೀಡುಬಿಟ್ಟ ಕಾಳಿಂಗ ಸರ್ಪ: ರಕ್ಷಿಸಿ ಕಾಡಿಗೆ ಬಿಟ್ಟ ಉರಗ ತಜ್ಞ