ಕರ್ನಾಟಕ

karnataka

ETV Bharat / state

ಸೋಲಿನ ಇತಿಹಾಸ ಬೇಡ, ಗೆಲುವಿನ ಇತಿಹಾಸ ಹೇಳಬೇಕಿದೆ: ಸಚಿವ ಬಿ.ಸಿ. ನಾಗೇಶ - ಸ್ವಾತಂತ್ರ್ಯಕ್ಕಾಗಿ ಆದ ತ್ಯಾಗ ಬಲಿದಾನಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು

ಬ್ರಿಟೀಷರು ಬುದ್ದಿವಂತಿಕೆಯಿಂದ, ಶಕ್ತಿಯಿಂದ ಈ ದೇಶದ ಮೇಲೆ ಆಕ್ರಮಣ ಮಾಡಲಿಲ್ಲ. ಬದಲಾಗಿ ಅಕ್ರಮ, ಅನ್ಯಾಯ, ಒಡೆದಾಳುವ ನೀತಿ ಮೂಲಕ ಆಕ್ರಮಿಸಿದರು. ಆದರೆ, ಒಂದು ಕಾಲದಲ್ಲಿ ನಮ್ಮ ಕ್ರಾಂತಿಕಾರಿಗಳು ಬ್ರಿಟೀಷರ ನಿದ್ದೆಗೆಡಿಸಿದ್ದರು ಎಂದು ಸಚಿವ ಬಿ.ಸಿ. ನಾಗೇಶ ಇದೇ ವೇಳೆ ಹೇಳಿದರು.

B C Nagesh
ಸಚಿವ ಬಿ.ಸಿ. ನಾಗೇಶ

By

Published : May 28, 2022, 4:35 PM IST

Updated : May 28, 2022, 5:46 PM IST

ಕೊಪ್ಪಳ: ಭಾರತದ ಸೋಲಿನ ಇತಿಹಾಸ ಬರೆಯಲಾಗಿದೆಯೇ ಹೊರತು, ಭಾರತದ ಗೆಲುವಿನ ಇತಿಹಾಸವನ್ನು ಬರೆಯಲಿಲ್ಲ. ಸ್ವಾತಂತ್ರ್ಯ ಬಂದ ಬಳಿಕ ಬಂದ ಸರ್ಕಾರಗಳು ಸತ್ಯವನ್ನು ತಿಳಿಸುವ ಕೆಲಸ ಮಾಡಲಿಲ್ಲ ನಾವು ಗೆಲುವಿನ ಇತಿಹಾಸ ಹೇಳಲು ಹೊರಟಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.

ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು‌, ಭಾರತದಲ್ಲಿ ಪರಕೀಯರ ಆಕ್ರಮಣಕ್ಕೂ ಮುನ್ನ ನಮ್ಮದೇ ಆದಂತಹ ವ್ಯವಸ್ಥೆ ಇತ್ತು. ಮೊಘಲರು‌ ಮತ್ತು ಬ್ರಿಟೀಷರು ಈ ದೇಶಕ್ಕೆ ಅನ್ಯಾಯ ಮಾಡಿದಷ್ಟು ಬೇರೆಯಾರು ಮಾಡಲಿಲ್ಲ. ನಮ್ಮ ದೇವಸ್ಥಾನಗಳನ್ನು ಒಡೆದು ಹಾಕುವಂತಹ ಕೆಲಸವನ್ನು ಮೊಘಲರು ಮಾಡಿದರು. ಮೊಘಲರು ಈ ದೇಶದ ಸಂಸ್ಕೃತಿ ಹಾಳು ಮಾಡಿ ನಮ್ಮ ಸ್ವಾಭಿಮಾನವನ್ನು ಕಿತ್ತುಕೊಳ್ಳುವಂತಹ ಪ್ರಯತ್ನ ಮಾಡಿದರು ಎಂದರು.

ನಮ್ಮ ದೇಶದವರು ಬೇರೆ ಕಡೆ ಕತ್ತಿ, ಖಡ್ಗ ಹಿಡಿದು ಯುದ್ದಕ್ಕೆ ಹೋಗಲಿಲ್ಲ

ಸ್ವಾತಂತ್ರ್ಯಕ್ಕಾಗಿ ಆದ ತ್ಯಾಗ ಬಲಿದಾನಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕಿದೆ: ನಮ್ಮ ದೇಶದವರು ಬೇರೆ ಕಡೆ ಕತ್ತಿ, ಖಡ್ಗ ಹಿಡಿದು ಯುದ್ದಕ್ಕೆ ಹೋಗಲಿಲ್ಲ.‌ ಬದಲಾಗಿ ಜ್ಞಾನವನ್ನು ಹಿಡಿದುಕೊಂಡು ಹೋದರು. ಬ್ರಿಟೀಷರು ಗುರುಕುಲ ಪದ್ದತಿಯ ಶಿಕ್ಷಣವನ್ನು ತೆಗೆಯಬೇಕು ಎಂದು ಶಿಕ್ಷಣ ಕಾಯ್ದೆಗಳನ್ನು ತಂದರು. ಬ್ರಿಟೀಷರು ಬುದ್ದಿವಂತಿಕೆಯಿಂದ, ಶಕ್ತಿಯಿಂದ ಈ ದೇಶದ ಮೇಲೆ ಆಕ್ರಮಣ ಮಾಡಲಿಲ್ಲ. ಬದಲಾಗಿ ಅಕ್ರಮ, ಅನ್ಯಾಯ, ಒಡೆದಾಳುವ ನೀತಿ ಮೂಲಕ ಆಕ್ರಮಿಸಿದರು. ಆದರೆ, ಒಂದು ಕಾಲದಲ್ಲಿ ನಮ್ಮ ಕ್ರಾಂತಿಕಾರಿಗಳು ಬ್ರಿಟೀಷರ ನಿದ್ದೆಗೆಡಿಸಿದ್ದರು. ಕೋಟ್ಯಂತರ ಜನರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಬಂದಿತು ಎಂದು ನಮ್ಮ ಮಕ್ಕಳಿಗೆ ಹೇಳಿಕೊಡಬೇಕು ಎಂದರು.

ಉಕ್ರೇನ್ ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಅವರು ಯಾವ ದೇಶವನ್ನು ಕರೆಯಲಿಲ್ಲ. ಎರಡೂ ದೇಶಗಳು ಭಾರತದ ಪ್ರಧಾನಿಯನ್ನು ಕರೆದರು. ಅಷ್ಟರ ಮಟ್ಟಿಗೆ ಇವತ್ತು ಭಾರತ ದೇಶ ರಾಷ್ಟಮಟ್ಟದಲ್ಲಿ ಉನ್ನತ ಸ್ಥಾನಕ್ಕೇರಿದೆ ಎಂದರು.

ಇದನ್ನೂ ಓದಿ:ತನಿಖೆ ಸಂಪೂರ್ಣ ಆಗುವವರೆಗೆ ಯಾವುದೇ ನಿರ್ಧಾರ ಇಲ್ಲ : ಮುಖ್ಯಮಂತ್ರಿ ಬೊಮ್ಮಾಯಿ

Last Updated : May 28, 2022, 5:46 PM IST

ABOUT THE AUTHOR

...view details