ಗಂಗಾವತಿ:ಲಾಕ್ಡೌನ್ ನಡುವೆ ಪ್ರಯಾಣಿಕರ ಸೇವೆಯಲ್ಲಿ ನಿರತರಾಗಿರುವ ಸಾರಿಗೆ ಸಂಸ್ಥೆಯ ನೌಕರರಿಗೆ ಆರೋಗ್ಯ ಇಲಾಖೆಯ ಆಯುಷ್ ವಿಭಾಗದಿಂದ ಉಚಿತವಾಗಿ ಔಷಧ ವಿತರಿಸಲಾಯಿತು.
ಸಾರಿಗೆ ಸಂಸ್ಥೆ ವಾರಿಯರ್ಸ್ಗೆ ಉಚಿತ ಔಷಧ ವಿತರಿಸಿದ ಆಯುಷ್ ಇಲಾಖೆ - Ayush depertment
ಕೊರೊನಾ ವಾರಿಯರ್ಸ್‌ಗಳಾದ ಆರೋಗ್ಯ, ಪೊಲೀಸ್, ಮಾಧ್ಯಮದ ಪ್ರತಿನಿಧಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಈಗಾಗಲೇ ಔಷಧ ವಿತರಿಸಲಾಗಿದೆ ಎಂದು ಆಯುಷ್ ಇಲಾಖೆಯ ತಾಲ್ಲೂಕು ವೈದ್ಯಾಧಿಕಾರಿ ಡಾ. ಗುರುರಾಜ ಉಮಚಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ಗುರುರಾಜ ಉಮಚಗಿ, ಸಾರಿಗೆ ಸಂಸ್ಥೆಯ 431 ನೌಕರರಿಗೆ ಮಾತ್ರೆಗಳನ್ನು ನೀಡಲಾಗುತ್ತಿದ್ದು, ಇವುಗಳನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಹೋಮಿಯೋಪತಿ ಮಾತ್ರೆಗಳನ್ನು ದಿನಕ್ಕೆ ಒಂದರಂತೆ ನಾಲ್ಕು ದಿನ ಮಾತ್ರ ತೆಗೆದುಕೊಳ್ಳಬೇಕು. ಮುಂದಿನ ತಿಂಗಳು ಮತ್ತೆ ನಾಲ್ಕು ಹೀಗೆ ಡಿಸೆಂಬರ್‌ವರೆಗೂ ಸೇವಿಸಬೇಕು. ಇದರೊಂದಿಗೆ ಆಯುರ್ವೇದ ಮಾತ್ರೆಯೊಂದನ್ನು ನೀಡಲಾಗುತ್ತಿದ್ದು, ಅದನ್ನು ನಿತ್ಯ ಸೇವಿಸಬೇಕು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸೋಂಕು ಹರಡದಂತೆ ಕೆಲಸ ಮಾಡಬಹುದು ಎಂದರು.