ಗಂಗಾವತಿ :ಚರಂಡಿ ಬ್ಲಾಕ್ ಆಗುತ್ತಿರುವ ಮತ್ತು ತ್ಯಾಜ್ಯ ಸಂಗ್ರಹವಾಗುತ್ತಿರುವ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕಿವಿಗೊಡದ ನಗರಸಭೆ ಅಧಿಕಾರಿಗಳ ವಿಳಂಬ ಧೋರಣೆ ಖಂಡಿಸಿ ಆಟೋ ಚಾಲಕರು ಶ್ರಮದಾನ ಮಾಡಿದ ಘಟನೆ ನಗರದಲ್ಲಿ ನಡೆಯಿತು.
ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಣಾ ಗೋಡೆಗೆ ಅಂಟಿಕೊಂಡಂತೆ ನಿತ್ಯ ನೂರಾರು ಆಟೋ ನಿಲ್ಲುತ್ತವೆ. ಆದರೆ ಇತ್ತೀಚಿಗೆ ಕೈಗೊಳ್ಳಲಾಗಿದ್ದ ಅಮೃತ ಸಿಟಿ ಯೋಜನೆಯಲ್ಲಿನ ಚರಂಡಿ ಕಾಮಗಾರಿಯಿಂದ ಆಟೋ ಚಾಲಕರಿಗೆ ಸಮಸ್ಯೆಯಾಗಿತ್ತು. ಚರಂಡಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರ, ಆಟೋಗಳನ್ನು ನಿಲ್ಲಿಸುತ್ತಿದ್ದ ಸ್ಥಳದಲ್ಲಿ ಚರಂಡಿಯ ಒಂದು ಭಾಗವನ್ನು ಮುಚ್ಚದೇ ಬಿಟ್ಟಿದ್ದರು.