ಕರ್ನಾಟಕ

karnataka

ಗಂಗಾವತಿಯಲ್ಲಿ ಪೊಲೀಸರೆದುರೇ ವಿದೇಶಿಗರ ದುರ್ವರ್ತನೆ!

ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮೂವರು ಆಸ್ಟ್ರೇಲಿಯಾ ಮೂಲದ ಪ್ರವಾಸಿಗರನ್ನು ತಡೆದ ಪೊಲೀಸರು ವಾಹನದ ವಿಮೆ, ಡ್ರೈವಿಂಗ್ ಲೈಸನ್ಸ್ ತೋರಿಸುವಂತೆ ಕೋರಿದ್ದಾರೆ. ಆದರೆ ಇದರಿಂದ ಕೋಪಗೊಂಡ ವಿದೇಶಿಗರು ಪೊಲೀಸರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ.

By

Published : Oct 14, 2019, 1:27 PM IST

Published : Oct 14, 2019, 1:27 PM IST

Updated : Oct 14, 2019, 1:43 PM IST

ಪೊಲೀಸರೆದುರೇ ದುಂಡಾವರ್ತನೆ ತೋರುತ್ತಿರುವ ಆಸ್ಟ್ರೇಲಿಯನ್ನರು

ಗಂಗಾವತಿ:ಪೊಲೀಸ್ ತಪಾಸಣೆ ವೇಳೆ ಸಹಕಾರ ನೀಡದೇ ಆಸ್ಟ್ರೇಲಿಯಾದ ಇಬ್ಬರು ಯುವತಿಯರು, ಓರ್ವ ಯುವಕ ದುರ್ವರ್ತನೆ ತೋರಿರುವ ಘಟನೆ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿಂದು ನಡೆದಿದೆ.

ಆನೆಗೊಂದಿ ಸುತ್ತಮುತ್ತಲ ಪ್ರದೇಶದ ಪ್ರವಾಸಕ್ಕೆಂದು ಆಸ್ಟ್ರೇಲಿಯನ್ನರು, ದ್ವಿಚಕ್ರವಾಹನದಲ್ಲಿ ಮೂರು ಜನ ಬಂದಿದ್ದಾರೆ. ಇದನ್ನು ಸಂಚಾರಿ ಪೊಲೀಸರು ಪ್ರಶ್ನಿಸಿದ್ದು, ವಾಹನದ ವಿಮೆ, ಡ್ರೈವಿಂಗ್ ಲೈಸನ್ಸ್ ತೋರಿಸುವಂತೆ ಕೋರಿದ್ದಾರೆ. ಇಷ್ಟಕ್ಕೇ ಸಿಟ್ಟಿಗೆದ್ದ ಪ್ರವಾಸಿಗರು, ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರೆದುರೇ ಲೈಸನ್ಸ್​​, ವಿಮೆ ಕೇಳಿದ್ದಕ್ಕೆ ಪೊಲೀಸರೊಂದಿಗೆ ವಿದೇಶಿಗರ ದುರ್ವರ್ತನೆ

ಸಾರ್ವಜನಿಕ ಪ್ರದೇಶದಲ್ಲಿ ವಿದೇಶಿಗರು ಅನುಚಿತವಾಗಿ ವರ್ತಿಸಿದ್ದರಿಂದ ಠಾಣೆಗೆ ಬರುವಂತೆ ಸೂಚನೆ ನೀಡಿ ವಾಹನ ಸಮೇತ ಪೊಲೀಸರು ತೆರಳಿದ್ದಾರೆ. ಠಾಣೆಗೆ ಬಂದ ವಿದೇಶಿಗರ ಪೈಕಿ ಚಾಲರ್ ಎಂಬ ಮಹಿಳೆ ಪೊಲೀಸರ ಫೊಟೋ ಕ್ಲಿಕ್ಕಿಸುವುದು, ಠಾಣೆಯ ಚಿತ್ರಗಳನ್ನು ತಮ್ಮ ಮೊಬೈಲ್​​​ನಲ್ಲಿ ಸೆರೆ ಹಿಡಿದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾಳೆ ಎನ್ನಲಾಗ್ತಿದೆ.

ಈ ಕುರಿತು ಈಟಿವಿ ಭಾರತನೊಂದಿಗೆ ಮಾತನಾಡಿರುವ ಸಂಚಾರಿ ಪಿಎಸ್ಐ ನಾಗರಾಜ್ ಅವರು, ಒಂದೇ ವಾಹನದಲ್ಲಿ ಮೂರು ಜನ ಬಂದಿದ್ದಾರೆ. ಡ್ರೈವಿಂಗ್ ಲೈಸನ್ಸ್, ಇನ್ಷುರೆನ್ಸ್ ಯಾವುದೂ ಇಲ್ಲ. ಪ್ರಶ್ನಿಸಿದ್ದಕ್ಕೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.

Last Updated : Oct 14, 2019, 1:43 PM IST

For All Latest Updates

TAGGED:

ABOUT THE AUTHOR

...view details