ಕರ್ನಾಟಕ

karnataka

ETV Bharat / state

ಪುರಸಭೆ ಅಧ್ಯಕ್ಷರ ಎದುರೇ ಜೆಇ ಮೇಲೆ ಹಲ್ಲೆಗೆ ಯತ್ನ: ದೂರು ದಾಖಲು - Attempted assault on JE

ಕುಷ್ಟಗಿ ಪಟ್ಟಣದ 12ನೇ ವಾರ್ಡ್​ನಲ್ಲಿ ಪೈಪ್​​ಲೈನ್ ಕಾಮಗಾರಿ ಭೂಮಿಪೂಜೆಯಲ್ಲಿ ಭಾಗವಹಿಸಿದ್ದ ಜೆಇ ಚಿದಾನಂದ ಅವರಿಗೆ ಶಿವರಾಜ್ ಕಟ್ಟಿಮನಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದು, ಈ ಸಂಬಂಧ ಕುಷ್ಟಗಿ ಠಾಣೆಯಲ್ಲಿ ದೂರು ದಾಖಲಾಗಿದೆ.

kushtagi
ಜೆಇ ಮೇಲೆ ಹಲ್ಲೆಗೆ ಯತ್ನ

By

Published : Dec 28, 2020, 2:50 PM IST

ಕುಷ್ಟಗಿ (ಕೊಪ್ಪಳ):ಕರ್ತವ್ಯನಿರತ ಪುರಸಭೆ ಜೆಇ ಚಿದಾನಂದಗೆ ಗುತ್ತಿಗೆದಾರ ಶಿವರಾಜ್ ಕಟ್ಟಿಮನಿ ಅವಾಚ್ಯ ಪದಗಳಿಂದ‌ ನಿಂದಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ಸೋಮವಾರ ನಡೆದಿದೆ.

ಪಟ್ಟಣದ 12ನೇ ವಾರ್ಡ್​ನಲ್ಲಿ ಪೈಪ್​​ಲೈನ್ ಕಾಮಗಾರಿ ಭೂಮಿಪೂಜೆಯಲ್ಲಿ ಭಾಗವಹಿಸಿದ್ದ ಜೆಇ ಚಿದಾನಂದ ಅವರಿಗೆ ಶಿವರಾಜ್ ಕಟ್ಟಿಮನಿ ಅವಾಚ್ಯ ಪದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಅಲ್ಲಿಯೇ ಇದ್ದ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಪುರಸಭೆ ಸದಸ್ಯ ಅಂಬಣ್ಣ ಭಜಂತ್ರಿ, ಬಸವರಾಜ ಬುಡಕುಂಟಿ, ಅಮೀನುದ್ದೀನ ಮುಲ್ಲಾ ಮತ್ತಿತರರು ಹಲ್ಲೆ ಮಾಡುವುದನ್ನು ತಡೆದಿದ್ದಾರೆ. ಈ ಸಂಬಂಧ ಕುಷ್ಟಗಿ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.

ಘಟನೆಗೆ ಕಾರಣ?:

ಜೆಇ ಚಿದಾನಂದ ಪಂಚಾಯತ್​​​ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಜೆಇ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಶಿವರಾಜ್​​​ ಕಟ್ಟಿಮನಿ ಜಿ.ಪಿ.ಎಸ್. ವಿಚಾರವಾಗಿ ಇನ್ನೋರ್ವ ಜೆಇ ಶರಣಗೌಡ ಅವರನ್ನು ನಿಂದಿಸಿದ್ದರಂತೆ. ಆಗ ಶಿವರಾಜ್ ಕಟ್ಟಿಮನಿ ಹಾಗೆಲ್ಲ ನಿಂದಿಸಬಾರದು ಎಂದು ತಿಳಿಹೇಳಿದ್ದರಂತೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ 12ನೇ ವಾರ್ಡ್​ನಲ್ಲಿ ಪೈಪ್​ಲೈನ್ ಕಾಮಗಾರಿಯ ಭೂಮಿಪೂಜೆಯ ವೇಳೆ ಏಕಾಏಕಿ ಜೆಇ ಚಿದಾನಂದ ಮೇಲೆ ಹಲ್ಲೆಗೆ ಯತ್ನಿಸಿ, ಮೂರ್ನಾಲ್ಕು ಲಕ್ಷ ನೀಡಿ, ಸುಫಾರಿ ಕೊಟ್ಟು ಮುಗಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿರುವುದಾಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಆರೋಪಿಸಿದ್ದಾರೆ.

ABOUT THE AUTHOR

...view details