ಕರ್ನಾಟಕ

karnataka

ETV Bharat / state

ಸಂಘ ಪರಿವಾರದ ಮುಖಂಡನ ಮೇಲೆ ದಾಳಿಗೆ ಯತ್ನ: ಕೈ ಮುಖಂಡ ಸೇರಿ 20 ಜನರ ವಿರುದ್ಧ ದೂರು - complaint against congress leader syed ali

ಗಂಗಾವತಿಯಲ್ಲಿ ಸಂಘ ಪರಿವಾರದ ಮುಖಂಡ ಸಂತೋಷ್ ಕೆಲೋಜಿ ಮೇಲೆ ಮಧ್ಯರಾತ್ರಿ ದಾಳಿ ಯತ್ನ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸೈಯದ್ ಅಲಿ ಹಾಗೂ ಇತರೆ 20 ಜನರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ತನಗೆ ಬೆದರಿಕೆ ಹಾಕಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಕೆಲೋಜಿ ದೂರು ನೀಡಿದ್ದಾರೆ.

Attempt to attack the leader of the Sangh Parivar
ಸಂತೋಷ್ ಕೆಲೋಜಿ

By

Published : Nov 1, 2020, 11:11 AM IST

ಗಂಗಾವತಿ:ಸಂಘ ಪರಿವಾರದ ಮುಖಂಡ ಸಂತೋಷ್ ಕೆಲೋಜಿ ಮೇಲೆ ಮಧ್ಯರಾತ್ರಿ ದಾಳಿಗೆ ಯತ್ನಿಸಿದ ಘಟನೆ ಸಂಬಂಧ ಇಲ್ಲಿನ ನಗರಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ಸೈಯದ್ ಅಲಿ ಹಾಗೂ ಇತರೆ ಇಪ್ಪತ್ತು ಜನರ ವಿರುದ್ಧ ದೂರು ದಾಖಲಾಗಿದೆ.

ಕಾಂಗ್ರೆಸ್ ಮುಖಂಡ ಸೈಯದ್ ಅಲಿ

ಮಧ್ಯರಾತ್ರಿ ಸಂತೋಷ ಕೆಲೋಜಿ ಮನೆಯ ಸಮೀಪ ಬಂದಿದ್ದ ಆರೋಪಿಗಳು, ತನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಹೊರಕ್ಕೆ ಬಂದ್ರೆ ಜೀವ ಸಹಿತ ಬಿಡುವುದಿಲ್ಲವೆಂದು ಅವಾಜ್​ ಹಾಕಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ದೂರುದಾರ ಉಲ್ಲೇಖಿಸಿದ್ದಾರೆ.

ಅಲ್ಲದೆ ಅದೇ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಸೈಯದ್ ಅಲಿ, ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲಿ, ನಿನ್ನ ಆಸ್ತಿಯ ತನಿಖೆ ನಡೆಸಿ ಎಲ್ಲಾ ಆಸ್ತಿಯನ್ನು ನಗರಸಭೆಯ ವಶಕ್ಕೆ ಪಡೆಯಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂತೋಷ್ ದೂರಿನಲ್ಲಿ ವಿವರಿಸಿದ್ದಾರೆ.

ಸಂಘ ಪರಿವಾರದ ಮುಖಂಡನ ಮೇಲೆ ದಾಳಿಗೆ ಯತ್ನ

ಒಂದು ಕಾಲದ ಆಪ್ತ ಸ್ನೇಹಿತರಾಗಿದ್ದ ಸಂತೋಷ್ ಕೆಲೋಜಿ, ಸೈಯದ್ ಅಲಿ ಇಬ್ಬರೂ ಉತ್ತಮ ಒಡನಾಡಿಗಳಾಗಿದ್ದರು. ಇಬ್ಬರೂ ಸಂಘ ಪರಿವಾರದ ಹಿನ್ನೆಲೆ ಹೊಂದಿದ್ದಾರೆ. ಸೈಯದ್ ಅಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೂ ಆರ್​ಎಸ್ಎಸ್ ನಲ್ಲಿ ಗುರುತಿಸಿಕೊಂಡಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬದ್ಧ ವೈರಿಗಳಂತಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details