ಗಂಗಾವತಿ:ನಗರಸಭೆಯ ಆಯುಕ್ತರಾದ ವಿರೂಪಾಕ್ಷಮೂರ್ತಿ ವಿರುದ್ಧ ಸದಸ್ಯ ಎಫ್. ರಾಘವೇಂದ್ರ ಎಂಬುವವರು ನಗರ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.
ಗಂಗಾವತಿ ನಗರಸಭೆ ಆಯುಕ್ತರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು
ಗಂಗಾವತಿ ನಗರಸಭೆ ಆಯುಕ್ತರಾದ ವಿರೂಪಾಕ್ಷಮೂರ್ತಿ ಸಭೆಯಲ್ಲಿಯೇ ಜಾತಿ ಎತ್ತಿ ಬೈಯ್ದಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಕಮಿಷನರ್ ಮೇಲೆ ಜಾತಿನಿಂದನೆ ಪ್ರಕರಣ ದಾಖಲು
ಅಧ್ಯಕ್ಷೆ ಮಾಲಾಶ್ರೀ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಕಮಿಷನರ್ ಆಡಳಿತ ವೈಖರಿಗೆ ಆಕ್ಷೇಪಿಸಿದ್ದಕ್ಕೆ ವಿರೂಪಾಕ್ಷಮೂರ್ತಿ ಸಭೆಯಲ್ಲಿಯೇ ತಮ್ಮ ಮೇಲೆ ಜಾತಿ ಎತ್ತಿ ಬೈಯ್ದಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ರಾಘವೇಂದ್ರ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:ಕಿರುಕುಳ ಪ್ರಕರಣ.. ಜೊಮ್ಯಾಟೊ ಡೆಲಿವರಿ ಹುಡುಗನ ಬಂಧಿಸಿದ ಪೊಲೀಸರು