ಗಂಗಾವತಿ(ಕೊಪ್ಪಳ):ಕರ್ತವ್ಯನಿರತ ಜೆಸ್ಕಾಂ ಲೈನ್‌ಮನ್ ಮೇಲೆ ಯುವಕನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಾದರಕ್ಷೆಯಿಂದ ಥಳಿಸಲು ಮುಂದಾಗಿದ್ದಾನೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೊಪ್ಪಳ: ಜೆಸ್ಕಾಂ ಲೈನ್‌ಮನ್ ಮೇಲೆ ಹಲ್ಲೆ, ವಿಡಿಯೋ ವೈರಲ್ - ETV Bharat Kannada
ಕೊಪ್ಪಳದ ಜೆಸ್ಕಾಂ ಲೈನ್‌ಮನ್ ಮೇಲೆ ಯುವಕನೊಬ್ಬ ಪಾದರಕ್ಷೆಯಿಂದ ಹಲ್ಲೆಗೆ ಮುಂದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೆಸ್ಕಾಂ ಲೈನ್ ಮೇಲೆ ಹಲ್ಲೆ
ಜೆಸ್ಕಾಂ ಲೈನ್‌ಮನ್ ಗುರುಸಂಗಪ್ಪ ನಿಂಗಪ್ಪ ಮುಕಾಸಿ ಎಂಬುವವರ ಮೇಲೆ ಹಿರೇಜಂತಕಲ್ ಪ್ರದೇಶದ ನಿವಾಸಿ ವೀರೇಶ ಮಲ್ಲಪ್ಪ ಅಕ್ಕಿರೊಟ್ಟಿ ಹಾಗೂ ಇತರೆ ಇಬ್ಬರಿಗೆ ಕೊಲೆ ಬೆದರಿಕೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ. ನಾಲ್ವರು ಲೈನ್ಮ್ಯಾನ್ಗಳು ಹಿರೇಜಂತಕಲ್ ಪ್ರದೇಶದ ಹರಿಜನ ವಾಡದಲ್ಲಿರುವ ಅಖಂಡೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ತೇರು ಹೋಗುವ ರಸ್ತೆಯ ವಿದ್ಯುತ್ ತಂತಿ ತೆರವು ಕಾರ್ಯ ಮಾಡುತ್ತಿದ್ದಾಗ ಘಟನೆ ನಡೆದಿದೆ.
ಇದನ್ನೂ ಓದಿ :ವಿಜಯಪುರ: ಚಾಲಕನ ಗಮನ ಬೇರೆಡೆ ಸೆಳೆದು 18 ಲಕ್ಷ ರೂ ಎಗರಿಸಿದ ಖದೀಮರು