ಕರ್ನಾಟಕ

karnataka

ETV Bharat / state

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪತ್ರ ಚಳುವಳಿ ಆರಂಭಿಸಿದ ಆಶಾ ಕಾರ್ಯಕರ್ತೆಯರು - ಪತ್ರ ಚಳುವಳಿ

12 ಸಾವಿರ ರೂ. ವೇತನ ನಿಗದಿಗೊಳಿಸುವಂತೆ ಆಶಾ ಕಾರ್ಯಕರ್ತೆಯರು ಸರ್ಕಾರಕ್ಕೆ ಆಗ್ರಹಿಸಿದ್ದು, ಯಾವುದೇ ಸ್ಪಂದನೆ ಬಾರದ ಹಿನ್ನೆಲೆ ಇಂದು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

Later movement
Later movement

By

Published : Jul 15, 2020, 5:22 PM IST

ಕುಷ್ಟಗಿ/ಕೊಪ್ಪಳ: ಕೋವಿಡ್-19 ನಿಯಂತ್ರಿಸಲು ಸಕ್ರಿಯರಾಗಿರುವ ಆಶಾ ಕಾರ್ಯಕರ್ತೆಯರು 12 ಸಾವಿರ ರೂ. ವೇತನ ನಿಗದಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದು, ಯಾವುದೇ ಸ್ಪಂದನೆ ಬಾರದ ಹಿನ್ನೆಲೆ ಇಂದು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಚಳುವಳಿ ಆರಂಭಿಸಿದ್ದಾರೆ.

ಸ್ಥಳೀಯ ಅಂಚೆ ಕಚೇರಿಯಲ್ಲಿ ಸಿಎಂ ಯಡಿಯೂರಪ್ಪ ಅವರ ವಿಳಾಸಕ್ಕೆ ಪ್ರತಗಳನ್ನು ಬರೆದು ಅಂಚೆ ಪೆಟ್ಟಿಗೆಯಲ್ಲಿ ಪೋಸ್ಟ್ ಮಾಡಿದರು. ಸಿಎಂಗೆ ಬರೆದ ಪತ್ರದಲ್ಲಿ 12,000 ರೂ. ವೇತನ ನಿಗದಿ ಹಾಗೂ ಕೋವಿಡ್ ವೈರಸ್ ಸುರಕ್ಷತಾ ಸಾಮಗ್ರಿ, ಉಚಿತ ಕೋವಿಡ್ ಚಿಕಿತ್ಸೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ಆಶಾ ಕಾರ್ಯಕರ್ತೆ ಅಮರಮ್ಮ ಮಾಲಿ ಪಾಟೀಲ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಆಯಾ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು ಏಕಕಾಲದಲ್ಲಿ ಸಿಎಂ ವಿಳಾಸಕ್ಕೆ ಪತ್ರ ಬರೆದು, ಪೋಸ್ಟ್ ಮಾಡಿರುವುದಾಗಿ ತಿಳಿಸಿದರು.

ABOUT THE AUTHOR

...view details