ಕರ್ನಾಟಕ

karnataka

ETV Bharat / state

ಸೋಷಿಯಲ್ ಮೀಡಿಯಾದಲ್ಲೂ ಧೂಳೆಬ್ಬಿಸುತ್ತಿದ್ದಾನೆ ಕೊಪ್ಪಳದ ಈ ಪೋರ

ಹೋಗುಮಾ.. ಹೋಗುಮಾ ಲಾಂಗು ಡ್ರೈವು ಹೋಗುಮಾ... ಎನ್ನುತ್ತಾ ತನ್ನ ಕಂಠಸಿರಿಯಿಂದ ಸಂಗೀತಪ್ರೇಮಿಗಳ ಗಮನ ಸೆಳೆದಿದ್ದಾನೆ ಜಿಲ್ಲೆಯ ಪೋರ ಅರ್ಜುನ. ಸೋಷಿಯಲ್​ ಮೀಡಿಯಾದಲ್ಲೂ ತನ್ನದೇ ಹವಾ ಕ್ರಿಯೇಟ್​ ಮಾಡಿದ್ದಾನೆ ಕೊಪ್ಪಳದ ಈ ಬಾಲ ಪ್ರತಿಭೆ.

By

Published : May 10, 2019, 1:09 PM IST

Updated : May 10, 2019, 5:03 PM IST

ಅರ್ಜುನ ಇಟಗಿ

ಕೊಪ್ಪಳ :ಕಲರ್ಸ್​ ಸೂಪರ್​ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಗಿಲೆ ಕಾರ್ಯಕ್ರಮದಲ್ಲಿ ತನ್ನ ವಿಶಿಷ್ಠ ಹಾಡುಗಾರಿಕೆಯಿಂದ ಅರ್ಜುನ ಇಟಗಿ ಎಂಬ ಬಾಲಪ್ರತಿಭೆ ಎಲ್ಲರ ಮನ ಗೆದ್ದಿದ್ದಾನೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ತನ್ನದೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾನೆ ಈ ಅರ್ಜುನ.

ಹಾಡುಗಾರಿಕೆಯಿಂದ ಜನರನ್ನು ರಂಜಿಸುತ್ತಿರುವ ಅರ್ಜುನ ಇಟಗಿ

ಹೌದು, 7 ವರ್ಷ ವಯಸ್ಸಿನ ಈ ಪೋರಕಲರ್ಸ್​ ಸೂಪರ್​ನಲ್ಲಿ 'ಹೋಗುಮಾ ಹೋಗುಮಾ ಲಾಂಗು ಡ್ರೈವು ಹೋಗುಮಾ... ಎಂಬ ಹಾಡು ಹಾಡಿದ ಮೇಲಂತೂ ಅರ್ಜುನ್ ಇಟಗಿ ಸಖತ್ ಫೇಮಸ್​ ಆಗಿದ್ದಾನೆ. ಈ ಪುಟ್ಟ ವಯಸ್ಸಿನ ಈ ಪ್ರತಿಭೆ ಬಿಸಿಲನಾಡು ಕೊಪ್ಪಳ ಜಿಲ್ಲೆಯವನು ಎಂಬುದು ಹೆಗ್ಗಳಿಕೆ.

ಅರ್ಜುನ್ ಇಟಗಿ ಕಲರ್ಸ್​ ಸೂಪರ್​ ಪ್ರತಿಭೆ :

ಕಲರ್ಸ್​ ಸೂಪರ್​ನಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಗಿಲೆ‌ ಸೀಸನ್- 2 ಕಾರ್ಯಕ್ರಮದಲ್ಲಿ ತೀರ್ಪುಗಾರರು ಹಾಗೂ ಪ್ರೇಕ್ಷಕರ ಮನಸ್ಸು ಗೆದ್ದು ಫೇಮಸ್ ಆಗಿರುವ ಅರ್ಜುನ ಇಟಗಿ ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮದವನು. ಚನ್ನಬಸಪ್ಪ ಇಟಗಿ ಹಾಗೂ ಸರಸ್ವತಿ ದಂಪತಿಯ ಪುತ್ರ ಈ ಅರ್ಜುನ. ಇಟಗಿ 2 ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕಳೆದೊಂದು ವರ್ಷದಿಂದ ಈ ಬಾಲಕ ಸ್ವಯಂ ಆಗಿ ಹಾಡುಗಾರಿಕೆ ಕಲಿತು ರಾಜ್ಯಾದ್ಯಂತ ಈಗ ಮನೆಮಾತಾಗಿದ್ದಾನೆ.

ಅವನ ಬಾಡಿ ಲಾಂಗ್ವೇಜ್ ಹಿಂದಿದೆ ಇಂಟ್ರಸ್ಟಿಂಗ್​ ಸ್ಟೋರಿ :

ಹೌದು, ಅರ್ಜುನ ಇಟಗಿ ಯಾವುದೇ ಭಯ ಇಲ್ಲದೆ ವೇದಿಕೆ ಮೇಲೆ ತನ್ನದೇ ವಿಶೇಷ ಬಾಡಿ ಲಾಂಗ್ವೇಜ್ ಹಾಗೂ ಹಾಡುಗಾರಿಕೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಅದರ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ. ಅರ್ಜುನನ ತಂದೆ ಚನ್ನಬಸಪ್ಪ ಇಟಗಿ ಅವರು ಯಲಬುರ್ಗಾದಲ್ಲಿ ಜೆರಾಕ್ಸ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅವರ ಅಂಗಡಿ ಬಳಿ ವರ್ಷದ ಹಿಂದೆ ಮೊಬೈಲ್ ಮಾರಾಟಗಾರನೋರ್ವ ದೊಡ್ಡ ಸೌಂಡ್ ಬಾಕ್ಸ್ ಇಟ್ಟುಕೊಂಡು ಪ್ರಚಾರದ ಜೊತೆ ವ್ಯಾಪಾರ ನಡೆಸಿದ್ದ. ಅದರಂತೆ ಚನ್ನಬಸಪ್ಪ ಅವರು ಸಹ ಅಂತಹ ವ್ಯಾಪಾರಕ್ಕಾಗಿ ಸೌಂಡ್‍ಬಾಕ್ಸ್​ ಒಂದನ್ನ ತಂದಿದ್ದರಂತೆ. ಆ ವ್ಯಾಪಾರ ಬಿಟ್ಟಮೇಲೆ ಖಾಲಿ ಉಳಿದ ಸೌಂಡ್‍ಬಾಕ್ಸ್​ಅನ್ನು ಮನೆಯಲ್ಲಿ ಹಾಡು ಕೇಳಲು ಉಪಯೋಗಿಸಿದ್ದರಂತೆ. ಆಗ ಬಾಲಕ ಅರ್ಜುನ ಕರೋಕೆ ಮ್ಯೂಸಿಕ್​ ಮೂಲಕ ಆ ಸೌಂಡ್‍ಬಾಕ್ಸ್ ಬಳಸಿಕೊಂಡು ಹಾಡುಗಾರಿಕೆಯಲ್ಲಿ ಪಳಗಿದನು ಎನ್ನುತ್ತಾರೆ ಅರ್ಜುನನ ತಂದೆ ಚನ್ನಬಸಪ್ಪ ಇಟಗಿ.

ಹೀಗೆ ಹಾಡುಗಾರಿಕೆ ಆರಂಭಿಸಿದ್ದ ಅರ್ಜುನ ಈಗ ರಾಜ್ಯದ ಜನರ ಮನಸನ್ನು ಗೆದ್ದು ಎಲ್ಲರಿಗೂ ಪರಿಚಿತನಾಗಿದ್ದಾನೆ. ಅಲ್ಲದೇ ಈ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಅರ್ಜುನನ ಅಪ್ಪ-ಅಮ್ಮ ಸಹ ಇದರಿಂದ ಖುಷಿಯಾಗಿದ್ದಾರೆ. ಈಗ ಎಲ್ಲಿ ನೋಡಿದರೂ ಅರ್ಜುನ ಇಟಗಿಯ ಹಾಡಿದ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿವೆ.

Last Updated : May 10, 2019, 5:03 PM IST

For All Latest Updates

TAGGED:

ABOUT THE AUTHOR

...view details