ಕುಷ್ಟಗಿ(ಕೊಪ್ಪಳ): ಛಾಯಾಗ್ರಾಹಕರ ಹಾಗೂ ವಿಡಿಯೋಗ್ರಾಫರ್ಗಳ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ಈಡೇರಿಸಬೇಕೆಂದು ಆಗ್ರಹಿಸಿ ಸಂಘದಿಂದ ತಹಶೀಲ್ದಾರ್ ಎಂ. ಸಿದ್ದೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲೇಬೇಕು: ತಹಶೀಲ್ದಾರರಿಗೆ ಛಾಯಾಗ್ರಾಹಕರ ಮನವಿ - Photographers Association protest
ಛಾಯಾಗ್ರಹಣ, ಸ್ಟುಡಿಯೋ ನಂಬಿ ಜೀವನ ನಡೆಸುತ್ತಿದ್ದ ಹಲವು ಛಾಯಾಗ್ರಾಹಕರು ಕೊರೊನಾ ಸಂಕಷ್ಟದಿಂದ ಪಾರಾಗುವುದು ಕಷ್ಟಸಾದ್ಯವಾಗಿದೆ. ಹೀಗಾಗಿ ಅವರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ಈಡೇರಿಸಬೇಕು ಎಂದು ಒತ್ತಾಯಿಸಿ ಸಂಘದ ವತಿಯಿಂದ ತಹಶೀಲ್ದಾರ್ ಎಂ. ಸಿದ್ದೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ಛಾಯಾಗ್ರಾಹಕರ ಬೇಡಿಕೆಗಳಿಗೆ ಸರ್ಕಾರ ಸ್ಪಂಧಿಸಬೇಕೆಂದು ಆಗ್ರಹಿಸಿ ತಹಶೀಲ್ದಾರರಿಗೆ ಮನವಿ
ಛಾಯಾಗ್ರಾಹಕರು ಡಿಜಿಟಲ್ ಹಾಗೂ ಮೊಬೈಲ್ ಕ್ಯಾಮರಾ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಕೊರೊನಾ ಹಾವಳಿಗೆ ತುತ್ತಾಗಿದ್ದಾರೆ. ಛಾಯಾಗ್ರಹಣ, ಸ್ಟುಡಿಯೋ ನಂಬಿ ಜೀವನ ನಡೆಸುತ್ತಿದ್ದ ಹಲವು ಛಾಯಾಗ್ರಾಹಕರು ಕೊರೊನಾ ಸಂಕಷ್ಟದಿಂದ ಪಾರಾಗುವುದು ಕಷ್ಟಸಾಧ್ಯವಾಗಿದೆ. ಅಸಂಘಟಿತ ವರ್ಗದ ಛಾಯಾಗ್ರಾಹಕರಿಗೆ ಉತ್ತಮ ಜೀವನ ನಡೆಸಲು ಸರ್ಕಾರ ಪ್ರೋತ್ಸಾಹಧನ ನೀಡಬೇಕು ಎಂದು ಈ ವೇಳೆ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಮಹೇಂದ್ರ ಹಡಗಲಿ, ಉಪಾಧ್ಯಕ್ಷ ಆಶೋಕ ಪಾಟೀಲ್, ಗೌರವಾಧ್ಯಕ್ಷ ಭೀಮಸೇನರಾವ್ ಕುಲಕರ್ಣಿ ಮತ್ತಿತರರಿದ್ದರು.