ಕುಷ್ಟಗಿ (ಕೊಪ್ಪಳ) : ಕೋವಿಡ್-19 ಲಾಕ್ ಡೌನ್ ಜಾರಿಯಲ್ಲಿ ವೃತ್ತಿಪರ ಕಮ್ಮಾರ ಸಮಾಜ ಸಂಕಷ್ಟದಲ್ಲಿರುವ ಹಿನ್ನೆಲೆ ಸರ್ಕಾರ ಈ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಪರಿಹಾರ ಘೋಷಿಸಬೇಕೆಂದು ಕುಷ್ಟಗಿ ತಾಲೂಕು ಕಮ್ಮಾರ ಕ್ಷೇಮಾಭಿವೃದ್ಧಿ ಸಂಘದಿಂದ ತಹಶೀಲ್ದಾರ್ ಎಂ. ಸಿದ್ದೇಶ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಕಮ್ಮಾರ ಸಮುದಾಯಕ್ಕೂ ವಿಶೇಷ ಪ್ಯಾಕೇಜ್ ನೀಡಿ: ಸರ್ಕಾರಕ್ಕೆ ಮನವಿ - blacksmith community
ಕಮ್ಮಾರ ಸಮಾಜಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಕಮ್ಮಾರ ಸಮುದಾಯ ಕುಷ್ಟಗಿಯಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಕಮ್ಮಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಮನವಿ
ಕಮ್ಮಾರ ಸಮಾಜದ ಅಧ್ಯಕ್ಷ ಪರಶುರಾಮಪ್ಪ ಕಮ್ಮಾರ್ ಮಾತನಾಡಿ, ಕೊರೊನಾ ಲಾಕ್ಡೌನ್ ಜಾರಿ ದಿನದಿಂದ ಗೃಹ ನಿರ್ಮಾಣ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕಮ್ಮಾರಿಕೆ ವೃತ್ತಿಯ ಮಾಡುತ್ತಿರುವ ಜನರಿಗೆ ಕೆಲಸವೇ ಇಲ್ಲ. ಮುಖ್ಯಮಂತ್ರಿಗಳು ಕೆಲ ಸಮಾಜಕ್ಕೆ ನೆರವು ನೀಡಿದ ರೀತಿಯಲ್ಲಿ ಹಿಂದುಳಿದ ಕಮ್ಮಾರಿಕೆ ಸಮುದಾಯಕ್ಕೆ ಪ್ಯಾಕೇಜ್ ಪರಿಹಾರ ಘೋಷಿಸಬೇಕೆಂದು ಮನವಿ ಸಲ್ಲಿಸಿದರು.