ಕರ್ನಾಟಕ

karnataka

ETV Bharat / state

ಸರ್ವಿಸ್ ರಸ್ತೆಗಳ ಅಭಿವೃದ್ಧಿ ಸಂಬಂಧ ಡಿಸಿಎಂಗೆ ಮನವಿ ಮಾಡುತ್ತೇವೆ: ಶಂಕರ ಕರಪಡಿ - Indian National Highway Authority

ಮೇಲ್ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ತಾಲೂಕಿನ ಮೇಲ್ಸೇತುವೆ ಬದಿಯ ಸರ್ವಿಸ್ ರಸ್ತೆ ಅಭಿವೃದ್ಧಿ ಸಂಬಂಧ ಮನವಿ ಸಲ್ಲಿಸುವುದಾಗಿ ಶಂಕರ ಕರಪಡಿ ತಿಳಿಸಿದರು.

Kushtagi
ಕುಷ್ಟಗಿ

By

Published : Jun 16, 2020, 10:29 AM IST

ಕುಷ್ಟಗಿ (ಕೊಪ್ಪಳ): ತಾಲೂಕಿನ ಮೇಲ್ಸೇತುವೆ ಬದಿಯ ಸರ್ವಿಸ್ ರಸ್ತೆ ರಿಪೇರಿ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ಲೋಕಾರ್ಪಣೆಗೆ ಆಗಮಿಸುವ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮೇಲ್ಸೇತುವೆ ಹೋರಾಟಗಾರ ಶಂಕರ ಕರಪಡಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಮೇಲ್ಸೇತುವೆ ಹೋರಾಟದಲ್ಲಿ ಸಾರ್ವಜನಿಕರ ಪರವಾಗಿ ಮುಂಚೂಣಿಯಾಗಿ ಭಾಗವಹಿಸಿದ್ದೆವು. ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸರು 14 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸುದೀರ್ಘ ಮೂರೂವರೆ ವರ್ಷಗಳ ಬಳಿಕ ನ್ಯಾಯಾಲಯದಲ್ಲಿ ಈ ಪ್ರಕರಣ ಖುಲಾಸೆ ಕಂಡಿದೆ ಎಂದರು.

ಮೇಲ್ಸೇತುವೆ ಹೋರಾಟಗಾರ ಶಂಕರ ಕರಪಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸರ್ವಿಸ್ ರಸ್ತೆಗಳ ಕಾಮಗಾರಿಯನ್ನು ಆದ್ಯತೆಯಾನುಸಾರ ಮುಗಿಸದೆ ಮೇಲ್ಸೇತುವೆಯನ್ನು ತರಾತುರಿಯಲ್ಲಿ ಲೋಕಾರ್ಪಣೆ ಮಾಡಲು ಮುಂದಾಗಿದ್ದಾರೆ. ಈ ಮೇಲ್ಸೇತುವೆ ಸಿದ್ಧಗೊಳ್ಳಲು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಕಾರಣ. ಅವರ ಮಾತಿಗೆ ಓಗೊಟ್ಟು ಕಪ್ಪು ಪಟ್ಟಿ ಪ್ರದರ್ಶನದ ಹೋರಾಟ ವಾಪಸ್ ಪಡೆಯಲಾಗಿದೆ ಎಂದು ಹೇಳಿದರು.

ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಎರಡು ತಿಂಗಳ ಗಡುವಿನಲ್ಲಿ ಸರ್ವಿಸ್ ರಸ್ತೆ ಕೆಲಸಾರಂಭ ಮಾಡದೇ ಇದ್ದರೆ ಹೆದ್ದಾರಿ ತಡೆದು ಪ್ರತಿಭಟಿಸಲಿದ್ದೇವೆ. ನಮ್ಮ ವಿರುದ್ಧ ಮತ್ತೆ ಪ್ರಕರಣ ದಾಖಲಿಸಲಿ ಎಂದು ಎನ್​ಹೆಚ್​ಎಐಗೆ ಶಂಕರ ಕರಪಡಿ ಸವಾಲು ಹಾಕಿದ್ದಾರೆ.

ABOUT THE AUTHOR

...view details