ಗಂಗಾವತಿ:ಕೊರೊನಾದ ನೆಪವೊಡ್ಡಿ ಎಪಿಎಂಸಿ ಅಧಿಕಾರಿಗಳು ಹಮಾಲಿ ದರ ಪರಿಷ್ಕರಣೆ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದ ಗಂಜ್ ಹಮಾಲರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಕೊರೊನಾ ನೆಪವೊಡ್ಡಿ ದರ ಪರಿಷ್ಕರಣೆಗೆ ಹಿಂದೇಟು: ಪ್ರತಿಭಟನೆಗೆ ಮುಂದಾದ ಹಮಾಲರು - APMC Delays on Hamali's Rate Revision
ಗಂಗಾವತಿ ಎಪಿಎಂಸಿ ಅಧಿಕಾರಿಗಳು ಕೊರೊನಾ ನೆಪವೊಡ್ಡಿ ಹಮಾಲಿ ದರ ಪರಿಷ್ಕರಣೆಗೆ ಹಿಂದೇಟು ಹಾಕುತ್ತಿರುವ ಹಿನ್ನೆಲೆ ಗಂಜ್ ಹಮಾಲರು ಸಭೆ ನಡೆಸಿ ಪ್ರತಿಭಟಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಪ್ರತಿಭಟನೆ ನಡೆಸಲು ಹಮಾಲರ ನಿರ್ಧಾರ
ಎಪಿಎಂಸಿ ಆವರಣದ ಶ್ರಮಿಕ ಭವನದ ಸಮೀಪ ಅಧ್ಯಕ್ಷ ನಿರುಪಾದಿ ಬೆಣಕಲ್ ನೇತೃತ್ವದಲ್ಲಿ ಸಭೆ ನಡೆಸಿದ 150ಕ್ಕೂ ಹೆಚ್ಚು ಗಂಜ್ ಹಮಾಲರು, ಪ್ರತಿ ಎರಡುವರೆ ವರ್ಷಗಳಿಗೆ ಒಮ್ಮೆ ದರ ಪರಿಷ್ಕರಣೆ ಮಾಡಿಕೊಂಡು ಬರಲಾಗುತ್ತಿದೆ. ಕಳೆದ ವರ್ಷದ ದರ ಜೂನ್ 15ಕ್ಕೆ ಮುಗಿಯಲಿದೆ. ಆದರೆ, ಎಪಿಎಂಸಿ ಅಧಿಕಾರಿಗಳು ಕೊರೊನಾ ನೆಪವೊಡ್ಡಿ ಈ ಬಾರಿ ದರ ಪರಿಷ್ಕರಣೆಗೆ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.
ದರ ಪರಿಷ್ಕರಣೆಗೆ ಅಧಿಕಾರಿಗಳು ಹಿಂದೇಟು ಹಾಕಿದ್ದರಿಂದ ಎಪಿಎಂಸಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ.