ETV Bharat Karnataka

ಕರ್ನಾಟಕ

karnataka

ETV Bharat / state

ರಾಮ ಮಂದಿರ ಶಿಲಾನ್ಯಾಸಕ್ಕೆ ಅಂಜನಾದ್ರಿ ಬೆಟ್ಟದ ಶಿಲೆ, ಮಣ್ಣು, ಜಲ ಕಳುಹಿಸಲು ಸಿದ್ಧತೆ - ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ

ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಶಂಕುಸ್ಥಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಮಂದಿರ ನಿರ್ಮಾಣ ಕಾರ್ಯಕ್ಕೆ ಕೊಪ್ಪಳದ ಅಂಜನಾದ್ರಿ ಬೆಟ್ಟದ ಒಂದು ಶಿಲೆಯನ್ನು ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ಇದರ ಜೊತೆ ನೀರು ಹಾಗೂ ಮಣ್ಣು ಕೊಂಡೊಯ್ಯಲು ನಿರ್ಧರಿಸಲಾಗಿದೆ.

Anjnadri hill rock, mud, water ready to be sent to Ayodhya for mandir construction
ರಾಮಮಂದಿರ ಶಿಲಾನ್ಯಾಸಕ್ಕೆ ಅಂಜನಾದ್ರಿ ಬೆಟ್ಟದ ಶಿಲೆ, ಮಣ್ಣು,ಜಲ ಕಳುಹಿಸಲು ಸಿದ್ಧತೆ
author img

By

Published : Jul 25, 2020, 4:22 PM IST

ಕೊಪ್ಪಳ:ಅಯೋಧ್ಯೆಯಲ್ಲಿ‌ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರ‌ದ ಶಂಕುಸ್ಥಾಪನೆಗೆ ಜಿಲ್ಲೆಯ ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ ಪರ್ವತದಿಂದ‌ ಒಂದು ಶಿಲೆ, ಮಣ್ಣು ಹಾಗೂ ಜಲ ಕಳಿಸಲಾಗುತ್ತಿದೆ.

ಪವಿತ್ರ ಜಲ, ಮಣ್ಣು ಹಾಗೂ ಶಿಲೆಯನ್ನು ಅಯೋಧ್ಯೆಗೆ ಕಳುಹಿಸಲು ಶ್ರೀರಾಮಸೇನೆ ಸಿದ್ಧತೆ ನಡೆಸಿದೆ. ಈ ಕುರಿತಂತೆ ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ರಾಮಮಂದಿರ ಶಿಲಾನ್ಯಾಸಕ್ಕೆ ಅಂಜನಾದ್ರಿ ಬೆಟ್ಟದ ಶಿಲೆ, ಮಣ್ಣು, ಜಲ ಕಳುಹಿಸಲು ಸಿದ್ಧತೆ

ಈ ಶಿಲಾನ್ಯಾಸಕ್ಕೆ ದೇಶದ‌ ಮೂಲೆ ಮೂಲೆಯಿಂದ‌ ಪವಿತ್ರ ಸ್ಥಳಗಳಿಂದ ಶಿಲೆ, ಮೃತ್ತಿಕೆ (ಮಣ್ಣು) ಹಾಗೂ ಜಲ ತರಿಸಿಕೊಳ್ಳಲಾಗುತ್ತಿದೆ. ಶ್ರೀರಾಮ ಮತ್ತು ಹನುಮನಿಗೆ ಅವಿನಾಭಾವ ನಂಟಿದೆ. ಹೀಗಾಗಿ ಆಂಜನೇಯ ಜನಿಸಿದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಿಂದಲೂ ಶಿಲೆ, ಜಲ ಹಾಗೂ ಮಣ್ಣನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದರು.

ಅಂಜನಾದ್ರಿ ಬೆಟ್ಟದಲ್ಲಿನ ಶಿಲೆಯೊಂದನ್ನು ಇಟ್ಟಿಗೆ ಮಾದರಿಯಲ್ಲಿ ರೆಡಿ ಮಾಡಿ ಅದಕ್ಕೆ ಬೆಳ್ಳಿ ಕವಚ ಹಾಕಿ ಇದರ ಜೊತೆಗೆ ಮೃತ್ತಿಕೆ‌ ಹಾಗೂ ಜಲವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಇದೇ ಜುಲೈ 29ರಂದು ಅಂಜನಾದ್ರಿ ಹಾಗೂ ಹೊಸಪೇಟೆಯಲ್ಲಿ ಪೂಜೆ ಸಲ್ಲಿಸಿ ಅಯೋಧ್ಯೆಗೆ ಪ್ರಯಾಣ ಬೆಳೆಸಲಾಗುತ್ತದೆ ಎಂದರು.

ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್, ರಾಜ್ಯಾಧ್ಯಕ್ಷ ಅಂದೋಲ ಸಿದ್ದಲಿಂಗ ಸ್ವಾಮೀಜಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅಪಸ್ವರವೆತ್ತುವವರರಿಗೆ ಧಿಕ್ಕಾರವಿರಲಿ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾ‌ಣಕ್ಕೆ 500 ವರ್ಷಗಳ ಹೋರಾಟವಿದೆ. ಲಕ್ಷಾಂತರ ಭಕ್ತರ ಬಲಿದಾನವಾಗಿದೆ. ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ಆದರೆ ಅನವಶ್ಯಕವಾಗಿ ಕೆಲವರು ಅಪಸ್ವರವೆತ್ತಿ ವಿವಾದ ಸೃಷ್ಟಿಸೋದು ಸರಿಯಲ್ಲ ಎಂದರು.

ABOUT THE AUTHOR

...view details