ಗಂಗಾವತಿ: ತಾಲೂಕಿನ ಐತಿಹಾಸಿಕ, ಧಾರ್ಮಿಕ ಯಾತ್ರಾ ಸ್ಥಳಗಳಾದ ಅಂಜನಾದ್ರಿ, ಆನೆಗೊಂದಿ, ಪಂಪಾ ಸರೋವರ, ಹನುಮನಹಳ್ಳಿ, ತಿರುಮಲಾಪುರ ಹಾಗೂ ದುರ್ಗಾದೇವಿ ದೇವಸ್ಥಾನದ ಸುತ್ತಲೂ ಸಾರ್ವಜನಿಕ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಮಂಗಳವಾರ ಸಂಜೆ ಈ ಆದೇಶ ಹೊರಡಿಸಿದ್ದು, ಮುಂದಿನ ಆದೇಶ ಜಾರಿಯಾಗುವವರೆಗೆ ಸೂಚಿತ ಸ್ಥಳಗಳಲ್ಲಿ ಜನ ಸಂಚಾರ ನಿಷೇಧಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಸೂಚಿತ ಸ್ಥಳಗಳಲ್ಲಿ ಚಿರತೆ ಸೇರಿದಂತೆ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಹಲವು ಜನರ ಮೇಲೆ ದಾಳಿ ಮಾಡಿವೆ. ಜನ ವಸತಿ ಪ್ರದೇಶಕ್ಕೆ ನುಗ್ಗುವ ಭೀತಿಯಿಂದಾಗಿ ಅರಣ್ಯ ಇಲಾಖೆ ಜನ ಸಂಚಾರ ನಿಷೇಧಿಸುವಂತೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆ ಕಂದಾಯ ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿದ ವರದಿ ಅನುಸರಿಸಿ ಸಹಾಯಕ ಆಯುಕ್ತ ಈ ಆದೇಶ ಹೊರಡಿಸಿದ್ದಾರೆ.
ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಮಂಗಳವಾರ ಸಂಜೆ ಈ ಆದೇಶ ಹೊರಡಿಸಿದ್ದು, ಮುಂದಿನ ಆದೇಶ ಜಾರಿಯಾಗುವವರೆಗೆ ಸೂಚಿತ ಸ್ಥಳಗಳಲ್ಲಿ ಜನ ಸಂಚಾರಕ್ಕೆ ನಿಷೇಧವಿರಲಿದೆ.