ಕರ್ನಾಟಕ

karnataka

ETV Bharat / state

ಅಂಜನಾದ್ರಿಯೇ ಹನುಮನ ಜನ್ಮಸ್ಥಾನ: ಸಂಸದ ತೇಜಸ್ವಿ ಸೂರ್ಯ - ಅಂಜನಾದ್ರಿಯೇ ಹನುಮನ ಜನ್ಮಸ್ಥಾನ: ಸಂಸದ ತೇಜಸ್ವಿ ಸೂರ್ಯ

ಅಂಜನಾದ್ರಿ ವಿಚಾರವಾಗಿ ಹೇಳುವುದಾದರೆ ಕಿಷ್ಕಿಂಧೆ ಎಲ್ಲಿತ್ತು, ಹೇಗಿತ್ತು, ಅದರ ಸುತ್ತಲಿನ ಪರಿಸರ ಹೇಗಿತ್ತು ಎಂಬುದರ ಬಗ್ಗೆ ವಾಲ್ಮಿಕಿ ನೀಡುವ ಉದಾಹರಣೆಗಳು ಕಿಷ್ಕಿಂಧೆಗೆ ಹೆಚ್ಚು ಸಾಮಿಪ್ಯ ಇರುವ ಕಾರಣಕ್ಕೆ ಇದುವೆ ಅಂಜನಾದ್ರಿ, ಹನುಮನ ಜನ್ಮಸ್ಥಾನ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯ ಪಟ್ಟಿದ್ದಾರೆ.

Anjanadriya is the birthplace of Hanuman
ಸಂಸದ ತೇಜಸ್ವಿ ಸೂರ್ಯ

By

Published : Apr 3, 2022, 6:53 PM IST

Updated : Apr 3, 2022, 7:17 PM IST

ಗಂಗಾವತಿ(ಕೊಪ್ಪಳ):ವಿಜಯನಗರದ ಸೆರಗಲ್ಲಿರುವ ಆನೆಗೊಂದಿ ಸಮೀಪದ ಅಂಜನಾದ್ರಿಯೇ ಹನುಮನ ಜನ್ಮ ಭೂಮಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಯಾರು ಏನೇ ಹೇಳಿದರೂ ಕಿಷ್ಕಿಂಧೆಯೇ ನಮ್ಮ ಹನುಮನ ಜನ್ಮಭೂಮಿ ಎಂದು ಸಂಸದ ತೇಜಸ್ವಿಸೂರ್ಯ ಹೇಳಿದರು.

ಬಿಜೆಪಿ ಹಮ್ಮಿಕೊಂಡಿರುವ ಭಾರತ ದರ್ಶನ ಯಾತ್ರೆಯ ಭಾಗವಾಗಿ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗೆಡ್ಡೆ ಮತ್ತು ಚಿಕ್ಕರಾಂಪೂರದ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡಿದ ತೇಜಸ್ವಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತದಾದ್ಯಂತ ಯಾತ್ರೆ ಕೈಗೊಂಡಾಗ ಸಾವಿರಾರು ಸ್ಥಳಗಳು ರಾಮಾಯಣದ ಕಾಲಘಟ್ಟದೊಂದಿಗೆ ಹೋಲಿಕೆಯಾಗಿರುವುದು ಕಂಡು ಬರುತ್ತಿದೆ. ಹೀಗಾಗಿ ಪ್ರತೀತಿಗಳ ಮೇಲೆ ಭಾರತ ನಂಬಿಕೆ ಇಟ್ಟಿದೆ. ಯಾವುದನ್ನೂ ಅಲ್ಲಗಳೆಯುವಂತಿಲ್ಲ ಎಂದರು.

ಅಂಜನಾದ್ರಿಯೇ ಹನುಮನ ಜನ್ಮಸ್ಥಾನ: ಸಂಸದ ತೇಜಸ್ವಿ ಸೂರ್ಯ

ಆದರೆ ಅಂಜನಾದ್ರಿ ವಿಚಾರವಾಗಿ ಹೇಳುವುದಾದರೆ ಕಿಷ್ಕಿಂಧೆ ಎಲ್ಲಿತ್ತು, ಹೇಗಿತ್ತು, ಅದರ ಸುತ್ತಲಿನ ಪರಿಸರ ಹೇಗಿತ್ತು ಎಂಬುದರ ಬಗ್ಗೆ ವಾಲ್ಮಿಕಿ ನೀಡುವ ಉದಾಹರಣೆಗಳು ಕಿಷ್ಕಿಂಧೆಗೆ ಹೆಚ್ಚು ಸಾಮಿಪ್ಯ ಇರುವ ಕಾರಣಕ್ಕೆ ಈ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂಬುದು ಉಲ್ಲೇಖವಾಗುತ್ತದೆ.

ಇದನ್ನೂ ಓದಿ:ಯುಗಾದಿ ಹಬ್ಬದಂದು ಯಡಿಯೂರಪ್ಪ ನಿವಾಸಕ್ಕೆ ಹೊಸ ಅತಿಥಿ ಆಗಮನ..

Last Updated : Apr 3, 2022, 7:17 PM IST

ABOUT THE AUTHOR

...view details