ಕರ್ನಾಟಕ

karnataka

ಸಾರ್ವಜನಿಕರಿಗೆ ಸೋಮವಾರದಿಂದ ಅಂಜನಾದ್ರಿ ದೇಗುಲ ಮುಕ್ತ

By

Published : Jun 6, 2020, 11:32 PM IST

ರಾಜ್ಯದಾದ್ಯಂತ ಇರುವ ಪ್ರಮುಖ ಪ್ರಾರ್ಥನಾ ಮಂದಿರಗಳ ಆರಂಭಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದರ ಹಿನ್ನೆಲೆ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯನ ದೇಗುಲದ ಆರಂಭಕ್ಕೆ ಇಲ್ಲಿನ ಆಡಳಿತಾಧಿಕಾರಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

Anjanadri hills Ready to Open for Devotees
ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯನ ದೇಗುಲದ ಆರಂಭ

ಗಂಗಾವತಿ: ಕೊರೊನಾ ಪರಿಣಾಮದಿಂದ ಸುಧೀರ್ಘ ಎರಡೂವರೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಾದ್ಯಂತ ಇರುವ ಪ್ರಮುಖ ಪ್ರಾರ್ಥನಾ ಮಂದಿರಗಳ ಆರಂಭಕ್ಕೆ ರಾಜ್ಯ ಸರ್ಕಾರ ಈಗ ಗ್ರೀನ್ ಸಿಗ್ನಲ್ ನೀಡಿದೆ.

ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ದೇಗುಲ

ಇದರ ಭಾಗವಾಗಿ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪುಣ್ಯ ಕ್ಷೇತ್ರವಾದ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯನ ದೇಗುಲದ ಆರಂಭಕ್ಕೆ ದೇಗುಲದ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸುಣ್ಣ-ಬಣ್ಣ ಕಂಡು ದೇಗುಲ ಹೊಳೆಯುತ್ತಿದೆ.

ಸಾರ್ವಜನಿಕರಿಗೆ ಸೋಮವಾರದಿಂದ ಅಂಜನಾದ್ರಿ ದೇಗುಲ ಮುಕ್ತ

ಇನ್ನು ಲಾಕ್​ಡೌನ್​ ಇರುವ ಕಾರಣ ದೈವರ ದರ್ಶನಕ್ಕೆಂದು ದೇಗುಲಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಅಲ್ಲದೇ ಆರು ಅಡಿಗಳಷ್ಟು ಸಾಮಾಜಿಕ ಅಂತರ ಕಾಪಾಡುವ ಉದ್ದೇಶಕ್ಕೆ ಈಗಾಗಲೆ ದೇಗುಲದ ಮುಂದೆ ಬಾಕ್ಸ್​ಗಳನ್ನು ಹಾಕಲಾಗಿದೆ.

ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ದೇಗುಲದ

ABOUT THE AUTHOR

...view details