ಗಂಗಾವತಿ: ಚುನಾವಣೆ ನೀತಿ ಸಂಹಿತೆ, ಕೊರೊನಾ ಭೀತಿ ಹಾಗೂ ವನ್ಯಜೀವಿಗಳ ನೆಪವೊಡ್ಡಿ ತಾಲೂಕಿನ ಅಂಜನಾದ್ರಿ ದೇಗುಲಕ್ಕೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ನಿಷೇಧಾಜ್ಞೆ ಮೀರಿ ಅಂಜನಾದ್ರಿಯಲ್ಲಿ ಸಾವಿರಾರು ಜನ ಸೇರಿ ಪೂಜೆ ಸಲ್ಲಿಸಿದ್ದಾರೆ.
ಕೊರೊನಾ, ಚುನಾವಣಾ ನೀತಿ ಸಂಹಿತೆ ನಡುವೆ ಅಂಜನಾದ್ರಿಯಲ್ಲಿ ಸಾವಿರಾರು ಮಂದಿ..! - Kopalla District Collector
ಚುನಾವಣೆ ನೀತಿ ಸಂಹಿತೆ, ಕೊರೊನಾ ನಿಷೇಧಾಜ್ಞೆ ನಡುವೆಯೂ ಅಂಜನಾದ್ರಿ ಬೆಟ್ಟದಲ್ಲಿ ಸಾವಿರಾರು ಜನ ಸೇರಿದ ಘಟನೆ ನಡೆದಿದೆ.
ಅಂಜನಾದ್ರಿಯಲ್ಲಿ ಸಾವಿರಾರು ಮಂದಿ..!
ರಾಜ್ಯದ ನಾನಾ ಜಿಲ್ಲೆಯಿಂದ ಆಗಮಿಸಿದ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಮಾಲಾಧಾರಿಗಳು ಹನುಮನ ಬೆಟ್ಟ ಏರಿ ಮಾಲೆ ವಿಸರ್ಜಿಸಿದರು. ಕೊರೊನಾ ಹಿನ್ನೆಲೆ ನಿಷೇಧಾಜ್ಞೆ ಹೇರಲಾಗಿತ್ತು. ಆದರೆ ಬಹುತೇಕ ಭಕ್ತರು ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಪಾಡದೇ ಬೆಟ್ಟ ಏರಿದ್ದು ಕಂಡು ಬಂತು.
ಜಿಲ್ಲಾಧಿಕಾರಿ ಆದೇಶ ಪಾಲಿಸುವಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಬಹುತೇಕ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.