ಗಂಗಾವತಿ(ಕೊಪ್ಪಳ): ಕಂಕಣ ಸೂರ್ಯಗ್ರಹಣದ ಕಾರಣ ಭಕ್ತರಿಗೆ ಇಂದು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯನ ದರ್ಶನವಿರುವುದಿಲ್ಲ.
ಸೂರ್ಯಗ್ರಹಣ: ಭಕ್ತರಿಗೆ ಅಂಜನಾದ್ರಿ ಹನುಮನ ದರ್ಶನವಿರಲ್ಲ - Anjanadri Hanuman temple news
ಕಂಕಣ ಸೂರ್ಯಗ್ರಹಣದ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದರ್ಶನಕ್ಕೆ ಭಕ್ತರಿಗೆ ಅವಕಾಶವಿರುವುದಿಲ್ಲ.
ಅಂಜನಾದ್ರಿ ಹನುಮನ ದರ್ಶನ
ಈ ಕುರಿತು ದೇಗುಲದ ಆಡಳಿತಾಧಿಕಾರಿ ಸಿ.ಎಸ್ ಚಂದ್ರಮೌಳಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಸೂರ್ಯಗ್ರಹಣ ಪ್ರಯುಕ್ತ ನಿನ್ನೆ ಬುಧವಾರ 6 ರಿಂದ ಇಂದು 12.30 ರವರೆಗೆ ದೇವರ ದರ್ಶನದ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಗ್ರಹಣದ ಸಂದರ್ಭದಲ್ಲಿ ದೋಷ ಉಂಟಾಗಬಾರದು ಎಂಬ ಧಾರ್ಮಿಕ ಕಾರಣಕ್ಕೆ ದೇಗುಲದ ಬಾಗಿಲು ಹಾಕಲಾಗಿದೆ.