ಗಂಗಾವತಿ:ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಹೊಂದಿರುವ ತಾಲೂಕಿನ ಆನೆಗೊಂದಿಯಲ್ಲಿ ಗಾಂಧೀ ಜಯಂತಿ ಅಂಗವಾಗಿ ವಿಭಿನ್ನವಾಗಿ ಜನಜಾಗೃತಿ ಮೂಡಿಸುವ ಕಾರ್ಯ ಗ್ರಾಮ ಪಂಚಾಯತ್ನಿಂದ ಹಮ್ಮಿಕೊಳ್ಳಲಾಗಿದೆ.
ಗಾಂಧೀ ಜಯಂತಿ ಪ್ರಯುಕ್ತ ವಿಭಿನ್ನ ರೀತಿಯಲ್ಲಿ ಜನ-ಜಾಗೃತಿಗೆ ಮುಂದಾದ ಗ್ರಾಮ ಪಂಚಾಯತ್
ಆನೆಗೊಂದಿ ಗ್ರಾಮದ ಸಾರ್ವಜನಿಕ ಸ್ಥಳ, ರಸ್ತೆ, ಶಾಲೆ, ಆಸ್ಪತ್ರೆ, ಬ್ಯಾಂಕು ಹೀಗೆ ನಾನಾ ಸ್ಥಳದ ಗೋಡೆಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ಬರೆಯುವ ಮೂಲಕ ಗ್ರಾಮ ಪಂಚಾಯತ್ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಗ್ರಾಮದ ಸಾರ್ವಜನಿಕ ಸ್ಥಳ, ರಸ್ತೆ, ಶಾಲಾ, ಆಸ್ಪತ್ರೆ, ಬ್ಯಾಂಕು ಹೀಗೆ ನಾನಾ ಸ್ಥಳಗಳಲ್ಲಿರುವ ಗೋಡೆಗಳ ಮೇಲೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ಬರೆಯುವ ಮೂಲಕ ಪಂಚಾಯತ್ನವರು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಐತಿಹಾಸಿಕ ಸ್ಮಾರಕಗಳಿದ್ದು, ಅವುಗಳ ಸುತ್ತಲೂ ಕಸಕಡ್ಡಿ ಬಿದ್ದಿರುವುದನ್ನು ಗಮನಿಸಿದ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಅವರು, ಜನರಲ್ಲಿ ಸ್ವಚ್ಛತೆಯ ಬಗ್ಗೆ ಗೋಡೆ ಬರಹಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ.
ಬಹುತೇಕರು ಗಾಂಧಿ ಜಯಂತಿಯನ್ನು ಕೇವಲ ವೇದಿಕೆ ಕಾರ್ಯಕ್ರಮ ಅಥವಾ ಸಭೆ, ಸಮಾರಂಭಕ್ಕೆ ಸೀಮಿತ ಮಾಡುತ್ತಾರೆ. ಆದರೆ ಆನೆಗೊಂದಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಮಾತ್ರ ವಿಭಿನ್ನ ಜಾಗೃತಿ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದೆ.