ಕರ್ನಾಟಕ

karnataka

ETV Bharat / state

ಇಂದು ಕೊಪ್ಪಳದಲ್ಲಿ ಮೈತ್ರಿ ಅಭ್ಯರ್ಥಿ ಪರ ಚಂದ್ರಬಾಬು ನಾಯ್ಡು ಮತಬೇಟೆ - ಚಂದ್ರಬಾಬು ನಾಯ್ಡು

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಂಧ್ರ ವಲಸಿಗ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಆಂಧ್ರ ಸಿಎಂ‌ ಮೂಲಕ ಸ್ಥಳೀಯ ಆಂಧ್ರ ಮೂಲದ ಜನರ ಮತ ಸೆಳೆಯಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಚಂದ್ರಬಾಬು ನಾಯ್ಡು

By

Published : Apr 21, 2019, 12:39 PM IST

ಕೊಪ್ಪಳ: ಆಂಧ್ರಪ್ರದೇಶದ ಸಿಎಂ‌ ಚಂದ್ರಬಾಬು ನಾಯ್ಡು ಇಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು, ಮೈತ್ರಿ ಸರ್ಕಾರದ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಇಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ್ ಪರ ಮತಯಾಚನೆ‌ ಮಾಡಲಿದ್ದಾರೆ.

ವೇದಿಕೆ ಸಿದ್ಧತೆ

ಸುಮಾರು 35 ರಿಂದ 40 ಸಾವಿರ ಜನರು‌ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಂಧ್ರ ವಲಸಿಗ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಆಂಧ್ರ ಸಿಎಂ‌ ಮೂಲಕ ಸ್ಥಳೀಯ ಆಂಧ್ರ ಮೂಲದ ಜನರ ಮತ ಸೆಳೆಯಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ABOUT THE AUTHOR

...view details