ಕೊಪ್ಪಳ: ಗವಿಮಠದಿಂದ ನಿರ್ಮಾಣವಾಗಲಿರುವ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ 1 ಕೋಟಿ 8 ಲಕ್ಷ ರೂಪಾಯಿಗಳ ದೇಣಿಗೆಯನ್ನು ಸಚಿವ ಆನಂದ್ ಸಿಂಗ್ ಕುಟುಂಬ ನೀಡಿದೆ.
ಕಳೆದ ಜೂನ್ 23ರಂದು ಗವಿಮಠದ ಆವರಣದಲ್ಲಿ ನಡೆದಿದ್ದ ಹಾಸ್ಟೆಲ್ ನಿರ್ಮಾಣ ಭೂಮಿ ಪೂಜೆ ಸಂದರ್ಭದಲ್ಲಿ 1.8 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಸಚಿವ ಆನಂದ್ ಸಿಂಗ್ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ 1.8 ಕೋಟಿ ರೂಪಾಯಿ ಚೆಕ್ ಅನ್ನು ಗುರುಪೂರ್ಣಿಮೆ ದಿನದಂದು ಗವಿಮಠಕ್ಕೆ ಆನಂದ್ ಸಿಂಗ್ ಮಗ ಸಿದ್ಧಾರ್ಥ್ ಸಿಂಗ್ ಕುಟುಂಬ ಸಮೇತರಾಗಿ ಆಗಮಿಸಿ ಹಸ್ತಾಂತರಿಸಿದರು.