ಗಂಗಾವತಿ: ಶುಭ ಕಾರ್ಯಗಳಿಗೆ ಆಮಂತ್ರಣ ಪತ್ರ ನೀಡಿ ಅತಿಥಿಗಳನ್ನು ಆಹ್ವಾನಿಸುವುದು ಸಹಜ. ಇಲ್ಲೊಬ್ಬ ಯುವಕ ತನ್ನ ಹಾಗೂ ಸಹೋದರನ ಮದುವೆಗೆ ಭಿನ್ನವಾಗಿ ಆಹ್ವಾನಿಸುತ್ತಿದ್ದಾನೆ
ಕಾರ್ಡ್ ಬದಲಿಗೆ ಸಸಿ ಕೊಟ್ಟು ಮದುವೆಗೆ ಆಹ್ವಾನಿಸಿದ ಗಂಗಾವತಿಯ ವರ - Gangavati news
ತಾಲೂಕಿನ ಆನೆಗೊಂದಿ ಗ್ರಾಮದ ಹನುಮಂತಪ್ಪ ಮಡ್ಡೇರಾ ಹಾಗೂ ವೆಂಕಟೇಶ ಮಡ್ಡೇರಾ ಎಂಬ ಸಹೋದದರ ವಿವಾಹ ಮೇ 24ರಂದು ನಡೆಯಲಿದೆ. ವರನೊಬ್ಬ ತಮ್ಮ ಮದುವೆ ಆಹ್ವಾನಕ್ಕೆ ಆಮಂತ್ರಣ ಪತ್ರಿಕೆಗಳ ಬದಲು ಸಸಿಗಳನ್ನು ನೀಡುತ್ತಿದ್ದಾನೆ.
An Inspirational Invitation Magazine in Gangavati
ತಾಲೂಕಿನ ಆನೆಗೊಂದಿ ಗ್ರಾಮದ ಹನುಮಂತಪ್ಪ ಮಡ್ಡೇರಾ ಹಾಗೂ ವೆಂಕಟೇಶ ಮಡ್ಡೇರಾ ಎಂಬ ಸಹೋದದರ ವಿವಾಹ ಮೇ 24ರಂದು ನಡೆಯಲಿದೆ. ವರನೊಬ್ಬ ತಮ್ಮ ಮದುವೆ ಆಹ್ವಾನಕ್ಕೆ ಆಮಂತ್ರಣ ಪತ್ರಿಕೆಗಳ ಬದಲು ಸಸಿಗಳನ್ನು ಸ್ನೇಹಿತರು, ಬಂಧುಗಳಿಗೆ ನೀಡುತ್ತಿದ್ದಾನೆ.
ನಾನಾ ಜಾತಿಯ ಸಸಿಗಳನ್ನು ಕೊಟ್ಟು, ಮನೆಯ ಆವರಣದಲ್ಲಿ ನೆಡುವಂತೆ ವರ ಹನುಮಂತಪ್ಪ ಮನವಿ ಮಾಡುತ್ತಿದ್ದಾನೆ. ಸಸಿನೆಟ್ಟ ಬಳಿಕ ಮದುವೆಗೆ ಬಂದು ಶುಭ ಹಾರೈಸಿ ಎಂದು ಕೇಳುತ್ತಿದ್ದಾನೆ.