ಕೊಪ್ಪಳ: ಅಬ್ಬುಸಾಹೇಬ ಕನಸಿನಲ್ಲಿ ಅಂಬಾದೇವಿ, ದೇವಸ್ಥಾನ ನಿರ್ಮಿಸಿ ನಿತ್ಯ ವಿಶೇಷ ಪೂಜೆ.. ಕೊಪ್ಪಳ:ಮುಸ್ಲಿಂ ಸಮುದಾಯದಕ್ಕೆ ಸೇರಿದ ವಿಕಲಚೇತನ ವ್ಯಕ್ತಿಯೊಬ್ಬರು ಗಮನ ಸೆಳೆದಿದ್ದಾರೆ. ಇವರ ಈ ಕಾರ್ಯದಿಂದ ಗ್ರಾಮದಲ್ಲಿ ಭಾವೈಕ್ಯತೆ ಮೂಡಿದೆ. ಹಿಂದೂ ದೇವಾಲಯ ಕಟ್ಟಿಸಿರುವ ಅವರು ದೇವಸ್ಥಾನದಲ್ಲಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಸಂದೇಶ ಸಾರಿ ಇತರರಿಗೆ ಮಾದರಿಯಾಗಿದ್ದಾರೆ. ಹೌದು, ಮುಸ್ಲಿಂ ಸಮುದಾಯದಕ್ಕೆ ಸೇರಿದ ಅಬ್ಬುಸಾಹೇಬ ಅವರು ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ಹಿಂದೂ ದೇವಾಲಯ ಕಟ್ಟಿಸಿದ್ದಾರೆ. ಈ ದೇವಸ್ಥಾನದಲ್ಲಿ ನಿತ್ಯವೂ ಪೂಜೆ ನೆರವೇರಿಸುತ್ತಿದ್ದಾರೆ.
ಪಂಚರ್ ಶಾಪ್ ಇಟ್ಟುಕೊಂಡು ಬದುಕಿನ ಬಂಡಿ ಸಾಗಿಸುತ್ತಿರುವ ಅಬ್ಬುಸಾಹೇಬ:ಇಂತಹ ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಅಬ್ಬುಸಾಹೇಬ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದವರು. ಇವರು ಹುಟ್ಟಿನಿಂದ ವಿಕಲಚೇತನರಾಗಿದ್ದಾರೆ. ಇನ್ನು ಹುಟ್ಟಿನಿಂದಲೇ ಹಿಂದೂ, ಮಸ್ಲಿಂ, ಕ್ರೈಸ್ತ ಸಮುದಾಯದವರೆಲ್ಲರೂ ಒಂದೇ ಎನ್ನುವ ಮನೋಭಾವವನ್ನು ಮೈಗೂಡಿಸಿಕೊಂಡು ಬೆಳೆದ ಇವರು, ಉಪಜೀವನಕ್ಕಾಗಿ ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಪಂಕ್ಚರ್ ಶಾಪ್ ಇಟ್ಟುಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ:ಕಾವಿ ಬಟ್ಟೆ, ಮಾಲೆ ಧರಿಸಿ ಅಂಜನಾದ್ರಿಗೆ ಬಂದು ಭಾವೈಕ್ಯತೆ ಸಾರಿದ ಮುಸ್ಲಿಂ ಭಕ್ತ
ಅಬ್ಬುಸಾಹೇಬ ಕನಸಲ್ಲಿ ಬಂದ ಅಂಬಾದೇವಿ:ಅದೊಂದು ದಿನ ಅಬ್ಬುಸಾಹೇಬ ಅವರ ಕನಸಿನಲ್ಲಿ ಅಂಬಾದೇವಿ ಬರುತ್ತಾಳೆ. ಇದರಿಂದ ಪ್ರೇರೇಪಿತರಾದ ಅವರು ಹಿಟ್ನಾಳ್ ಗ್ರಾಮದ ಒಂದೇ ಆವರಣದಲ್ಲಿ ಹೊನ್ನೂರಲಿ ದರ್ಗಾ ಹಾಗೂ ಬಂಗಾಳಿ ಅಂಬಾದೇವಿ ದೇವಸ್ಥಾನ ಕಟ್ಟಿಸಿದ್ದಾರೆ. ಅದಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರತಿದಿನ ಅಂಬಾದೇಬಿ ಹಾಗೂ ಹೊನ್ನೂರಲಿ ದರ್ಗಾಕ್ಕೆ ಇವರೇ ಪೂಜೆ ಮಾಡುತ್ತಿದ್ದು, ಈ ದೇವಸ್ಥಾನಕ್ಕೆ ಇದೀಗ ಭಕ್ತರ ದಂಡೇ ಹರಿದು ಬರುತ್ತಿದೆ.
ಇದನ್ನೂ ಓದಿ:ಭಾವೈಕ್ಯತೆಗೆ ಸಾಕ್ಷಿಯಾದ ಮಕ್ಕಳ ಸಾಮೂಹಿಕ ಅಕ್ಷರಾಭ್ಯಾಸ...!
ಭಾವೈಕ್ಯತೆ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ:ಕಳೆದ ಎರಡು ವರ್ಷದ ಹಿಂದೆ ಹಿಟ್ನಾಳ್ ಗ್ರಾಮದಲ್ಲಿ ಅಂಬಾದೇವಿ ಭಾವೈಕ್ಯತಾ ಆಶ್ರಯ ನಿರ್ಮಾಣವಾಗಿದೆ. ಕಳೆದ ಐದು ತಿಂಗಳ ಹಿಂದೆ ಆಶ್ರಮದ ಭಕ್ತರ ನೆರವಿನೊಂದಿಗೆ ಅಬ್ಬುಸಾಹೇಬ ಭವ್ಯವಾದ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೇ ಪೂಜೆ ಮಾಡಿರುವ ಅಬ್ಬುಸಾಹೇಬ ಅವರು ದೇಶದಲ್ಲಿ ಮತ್ತಷ್ಟು ಭಾವೈಕ್ಯತೆ ಹೆಚ್ಚಾಗಬೇಕು ಎನ್ನುವ ಆಶಾಭಾವ ಹೊಂದಿದ್ದಾರೆ. ಈ ಕಾರಣಕ್ಕಾಗಿ ಇಲ್ಲಿಗೆ ಬರುವ ಜನ ದರ್ಗಾ ಹಾಗೂ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಭಕ್ತರಿಗೆ ಕುಂಕುಮ ಹಚ್ಚುವ ಇವರು, ಹತ್ತು ಹಲವು ಮಂತ್ರಗಳನ್ನು ಪಠಿಸುವ ಮೂಲಕ ದೇವಿಗೆ ಪೂಜೆ ಸಲ್ಲಿಸುವುದು ತುಂಬಾ ವಿಶೇಷವಾಗಿದೆ. ಇವರ ಭಾವೈಕ್ಯತಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಬೆಂಗಳೂರು: ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿ ಜೀವ ಉಳಿಸಿಕೊಂಡ ಗಟ್ಟಿಗಿತ್ತಿ- ವಿಡಿಯೋ