ಕುಷ್ಟಗಿ(ಕೊಪ್ಪಳ): ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ನಿನ್ನೆ ಕೇಸೂರು ಕಂಟೈನ್ಮೆಂಟ್ ವ್ಯಾಪ್ತಿಯ ಗೃಹ ಕ್ವಾರಂಟೈನ್ ನಲ್ಲಿದ್ದವರಿಗೆ ಆತ್ಮಸ್ಥೈರ್ಯ ತುಂಬಿದರು.
ಹೋಮ್ ಕ್ವಾರಂಟೈನ್ನಲ್ಲಿದ್ದವರಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕ ಅಮರೇಗೌಡ - Amaregowdha patil bayyapur visit quarantine center
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ನಿನ್ನೆ ಕೇಸೂರು ಕಂಟೈನ್ಮೆಂಟ್ ವ್ಯಾಪ್ತಿಯಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದವರಿಗೆ ಆತ್ಮಸ್ಥೈರ್ಯತುಂಬಿದರು.

Koppal
ಕೇಸೂರು ಗ್ರಾಮದ (ರೋಗಿ ಸಂಖ್ಯೆ:2254) ನಿವಾಸದ ಮನೆಯವರನ್ನು ಹಾಗೂ ಸ್ಥಳೀಯರನ್ನು 6 ಅಡಿ ಅಂತರ ಕಾಯ್ದುಕೊಂಡು ಭೇಟಿ ಮಾಡಿ, ಯಾವುದೇ ಕಾರಣಕ್ಕೆ ಹತಾಶರಾಗದಿರಿ, ಮನೆಯಲ್ಲಿದ್ದು ರೋಗ ಗೆಲ್ಲಿರಿ. ನಿಮಗೆ ಗ್ರಾಮ ಪಂಚಾಯತಿಯಿಂದ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಂಡಿದೆ. ಜ್ವರ, ಕೆಮ್ಮು, ನೆಗಡಿ ಕಂಡು ಬಂದರೆ ಶಾಲೆಯಲ್ಲಿ ಫಿವರ್ ಕ್ಲಿನಿಕ್ ಆರಂಭಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಿದ ಅವರು ಆರೋಗ್ಯ ಇಲಾಖೆಯ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿ ಎಂದರು.