ಕರ್ನಾಟಕ

karnataka

ETV Bharat / state

'ಬಿಜೆಪಿಯವರಿಗೆ ಮಾತನಾಡುವುದೂ ಗೊತ್ತು ಯಾಮಾರಿಸುವುದೂ ಗೊತ್ತು' - kustagi latest news

ಬಿಜೆಪಿ ಗೊಂದಲಗಳನ್ನು ಸೃಷ್ಟಿಸಿ ಜನಪ್ರಿಯತೆಗಳಿಸಲು ಮುಂದಾಗಿದ್ದು, ಬಿಜೆಪಿಗರ ಅಗ್ಗದ ಜನಪ್ರಿಯತೆಗೆ ಜನರ ಪ್ರಾಣ ಹೋಗುವ ಪರಿಸ್ಥಿತಿ ಬಂದಿದೆ. ಬಿಜೆಪಿ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿದ್ದರೂ, ಕೊರೊನಾ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ ಶಾಸಕರು, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಸಾರ್ವಜನಿಕರಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ..

Amaregowda bayyapur spark against BJP
Amaregowda bayyapur spark against BJP

By

Published : May 31, 2021, 4:16 PM IST

Updated : May 31, 2021, 7:29 PM IST

ಕುಷ್ಟಗಿ(ಕೊಪ್ಪಳ):ಬೆಲೆ ಏರಿಕೆ, ಬರಗಾಲ, ಕೊರೊನಾದಂತಹ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಸಂಬಂಧ ಅಯ್ಯಯ್ಯೋ ಎನ್ನುವ ಬದಲಿಗೆ ಬಿಜೆಪಿ ಬಿಜೆಪಿ ಎಂದು ಬೊಬ್ಬಿಡುವಂತಾಗಿದೆ ಜನರ ಪರಿಸ್ಥಿತಿ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕಳವಳ ವ್ಯಕ್ತಪಡಿಸಿದರು.

ಕುಷ್ಟಗಿ ಪಟ್ಟಣದ 1ನೇ ವಾರ್ಡ್​ನ ಸಂತ ಶಿಶುನಾಳ ಷರೀಪ ಕಾಲೋನಿಯಲ್ಲಿ ಕೊರೊನಾ ನಿಯಂತ್ರಣದ ಲಾಕ್​ಡೌನ್ ಹಿನ್ನೆಲೆ ಬಡ ವರ್ಗದವರಿಗೆ ದಿನಸಿ ಕಿಟ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

ಬಿಜೆಪಿಯವರು 7 ದಶಕದಲ್ಲಿ ಮಾಡದ ಕೆಲಸವನ್ನು 7 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಲಾವಧಿಯಲ್ಲಾಗಿದೆ ಎನ್ನುವುದು ತೀರ ಹಾಸ್ಯಾಸ್ಪದ ಎಂದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಆಗಿನ ಸ್ಥಿತಿ ಏನಿತ್ತು, ನರೇಂದ್ರ ಮೋದಿ ಅವರ ಆಡಳಿತಾವಧಿಯ 7 ವರ್ಷಗಳಲ್ಲಿ ಏನಾಗಿದೆ ಎನ್ನುವುದು ಶ್ವೇತಪತ್ರ ಹೊರಡಿಸಬೇಕಿದೆ. ಬಿಜೆಪಿಯವರಿಗೆ ಚೆನ್ನಾಗಿ ಮಾತನಾಡುವುದು ಗೊತ್ತು ಅಷ್ಟೇ, ಯಾಮಾರಿಸುವುದು ಗೊತ್ತು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಗೊಂದಲಗಳನ್ನು ಸೃಷ್ಟಿಸಿ ಜನಪ್ರಿಯತೆಗಳಿಸಲು ಮುಂದಾಗಿದ್ದು, ಬಿಜೆಪಿಗರ ಅಗ್ಗದ ಜನಪ್ರಿಯತೆಗೆ ಜನರ ಪ್ರಾಣ ಹೋಗುವ ಪರಿಸ್ಥಿತಿ ಬಂದಿದೆ. ಬಿಜೆಪಿ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿದ್ದರೂ, ಕೊರೊನಾ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ ಶಾಸಕರು, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಸಾರ್ವಜನಿಕರಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ.

ಜನ ಕ್ಯೂನಲ್ಲಿ ನಿಂತು ಲಸಿಕೆ ಪಡೆಯುವಂತಾಗಿದ್ದು, 1 ಡೋಸ್ ಕೇವಲ 100 ರೂ. ಬೆಲೆಯ ವ್ಯಾಕ್ಸಿನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ಶೇ.40ರಷ್ಟು ಜನ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯತೆ ಇತ್ತು. ಈ ಬಿಜೆಪಿಗೆ ಅದನ್ನು ಮಾಡಲು ಸಾದ್ಯವಾಗಿಲ್ಲ ಎಂದು ಟೀಕಿಸಿದರು.

Last Updated : May 31, 2021, 7:29 PM IST

ABOUT THE AUTHOR

...view details