ಕೊಪ್ಪಳ: ಕೊರೊನಾ ನಿಯಂತ್ರಣ ಮಾಡಲು ಸೀಲ್ ಡೌನ್ ಮಾಡಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸಲು ತಜ್ಞರ ಸಮಿತಿ ಇದೆ. ತಜ್ಞರ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಜನರು ಬದ್ಧರಾಗಿರಬೇಕು ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಹೇಳಿದ್ದಾರೆ.
ಸೀಲ್ಡೌನ್ ಕುರಿತು ತಜ್ಞರ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ: ಅಮರೇಗೌಡ - koppal latest news
ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೀಲ್ ಡೌನ್ ಬೇಕಾ ಬೇಡವಾ ಎಂಬುದರ ಕುರಿತು ತಜ್ಞರ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಅಮರೇಗೌಡ ಪಾಟೀಲ್ ಭಯ್ಯಾಪುರ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ, ಅಧಿಕಾರಿಗಳು ಹಾಗೂ ಸಮಿತಿ ತೆಗೆದುಕೊಳ್ಳುವ ತೀರ್ಮಾನಗಳು ಎಲ್ಲಾ ಜನರ ಒಳಿತಿಗಾಗಿ ಎಂದು ಭಾವಿಸಿದ್ದೇವೆ. ಇದಕ್ಕೆ ನಮ್ಮ ಪಕ್ಷವೂ ಸಹಕಾರ ನೀಡುತ್ತದೆ. ಈ ಸಂದರ್ಭದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ನಿಮ್ಮ ಕೈಲಾದಷ್ಟು ಜನರಿಗೆ ಸಹಾಯ ಮಾಡಿ ಎಂದು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಅದರಂತೆ ನಾವೂ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಜನರಿಗೆ ನಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದೇವೆ ಎಂದರು.
ನಾನು ವೈಯಕ್ತಿಕವಾಗಿ ಕುಷ್ಟಗಿಯಲ್ಲಿ ಪ್ರತಿದಿನ 200 ಜನರಿಗೆ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿದ್ದೇನೆ. ನಿರ್ಗತಿಕರು ಇರುವಲ್ಲಿಗೆ ಹೋಗಿ ಊಟ ನೀಡಲಾಗುತ್ತಿದೆ. ಇದಕ್ಕೆ ಕೆಲವರು ಸಹಕಾರ ನೀಡಿದ್ದಾರೆ. ಹೀಗೆ ಕೈ ಜೋಡಿಸುವವರಿಗೆ ನಾವು ಬೇಡ ಎನ್ನುವುದಿಲ್ಲ ಎಂದು ಅಮರೇಗೌಡ ಪಾಟೀಲ್ ಹೇಳಿದರು.