ಕರ್ನಾಟಕ

karnataka

ETV Bharat / state

ಕೆಲ ನಿರ್ಬಂಧಗಳ ನಡುವೆ ಅಂಜನಾದ್ರಿ ದರ್ಶನಕ್ಕೆ ಭಕ್ತರಿಗೆ ಅವಕಾಶ

ಸೆಪ್ಟೆಂಬರ್​ 2 ರಿಂದ 30 ರ ವರೆಗಿನ ವಿಶೇಷ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ಚಿಕ್ಕರಾಂಪುರದಲ್ಲಿರುವ ಅಂಜನಾದ್ರಿ ದೇಗುಲಕ್ಕೆ ಭಕ್ತರ ಪ್ರವೇಶ, ದೇವರ ದರ್ಶನ ಮತ್ತು ಆರತಿ ಸೇವೆ ಜಿಲ್ಲಾಡಳಿತ ಅವಕಾಶ ನೀಡಿದೆ.

Anjanadri
ಅಂಜನಾದ್ರಿ

By

Published : Sep 4, 2021, 7:49 AM IST

ಗಂಗಾವತಿ: ಕೋವಿಡ್ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಅಂಜನಾದ್ರಿ ದೇವಸ್ಥಾನ ಪ್ರವೇಶಕ್ಕೆ ಸಾರ್ವಜನಿಕರಿಗೆ ಹೇರಿದ್ದ ನಿರ್ಬಂಧವನ್ನು ಸಡಿಲಗೊಳಿಸಿ ಆದೇಶ ಹೊರಡಿಸಿದೆ.

ಕೊರೊನಾ ಹಿನ್ನೆಲೆ ಜನಸಂದಣಿ ತಗ್ಗಿಸುವ ಉದ್ದೇಶದಿಂದ ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾದ ಅಂಜನಾದ್ರಿ ದೇಗುಲಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಿ, ದೇವಾಲಯದ ಸುತ್ತಲೂ ಸೆಕ್ಷನ್​144 ಜಾರಿ ಮಾಡಿತ್ತು. ಇದೀಗ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಆದೇಶವನ್ನು ಸಡಿಲಗೊಳಿಸಿ, ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ, ವಿಶೇಷ ದಿನಗಳಾದ ಶನಿವಾರ, ಬೆನಕನ ಅಮವಾಸ್ಯೆ, ವಿನಾಯಕ ಚತುರ್ಥಿ, ವೈಕುಂಠ ಏಕಾದಶಿಯಂತ ಧಾರ್ಮಿಕ ಪ್ರಾಶಸ್ತ್ಯ ದಿನಗಳಂದು ಜಿಲ್ಲಾಡಳಿತ ಭಕ್ತರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ಪ್ರತಿ

ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸೆಪ್ಟೆಂಬರ್​ 2 ರಿಂದ 30 ರ ವರೆಗಿನ ವಿಶೇಷ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ಚಿಕ್ಕರಾಂಪುರದಲ್ಲಿರುವ ಅಂಜನಾದ್ರಿ ದೇಗುಲಕ್ಕೆ ಭಕ್ತರ ಪ್ರವೇಶ, ದೇವರ ದರ್ಶನ ಮತ್ತು ಆರತಿ ಸೇವೆ ಜಿಲ್ಲಾಡಳಿತ ಅವಕಾಶ ನೀಡಿದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್​ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details