ಕರ್ನಾಟಕ

karnataka

ETV Bharat / state

ಆನೆಗೊಂದಿಯಲ್ಲಿ ಕಳಪೆ ಸಿಸಿ ರಸ್ತೆ ಕಾಮಗಾರಿ ಆರೋಪ.. ದೂರಿಗೆ ದೊರೆಯದ ಸ್ಪಂದನೆ - Gangavathi Update News

ಪಂಚಾಯತ್‌ನಲ್ಲಿ ಪ್ರಭಾವ ಹೊಂದಿರುವ ವ್ಯಕ್ತಿಗಳಿಗೆ ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ಅನಧಿಕೃತ ವಹಿಸಲಾಗಿದೆ. ಯಾವುದೇ ಎಸ್ಟಿಮೇಟ್, ಎಂಜಿನಿಯರಿಂಗ್ ಪ್ಲಾನ್ ಇಲ್ಲದೇ ತಮಗಿಷ್ಟ ಬಂದಂತೆ ಕಾಮಗಾರಿ ಅನುಷ್ಠಾನ ಮಾಡುತ್ತಿದ್ದಾರೆ..

Allegations of poor CC road works In Anegundi
ಆನೆಗೊಂದಿಯಲ್ಲಿ ಕಳಪೆ ಸಿಸಿ ರಸ್ತೆ ಕಾಮಗಾರಿ ಆರೋಪ

By

Published : Sep 30, 2020, 2:58 PM IST

ಗಂಗಾವತಿ :ತಾಲೂಕಿನ ಆನೆಗೊಂದಿ ಗ್ರಾಮದ ನಾನಾ ವಾರ್ಡ್‌ಗಳಲ್ಲಿ ಕೈಗೊಳ್ಳಲಾದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಅವೈಜ್ಞಾನಿಕ. ಜನರಿಗೆ ಉಪಯೋಗಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯತ್‌ ಪಿಡಿಒ ಮತ್ತು ತಾಲೂಕು ಪಂಚಾಯತ್‌ ಇಒ ಅವರಿಗೆ ದೂರು ನೀಡಿದ್ರೂ ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಸರ್ಕಾರದ ಲಕ್ಷಾಂತರ ರೂ. ಹಣ ಪೋಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಆನೆಗೊಂದಿಯಲ್ಲಿ ಕಳಪೆ ಸಿಸಿ ರಸ್ತೆ ಕಾಮಗಾರಿ ಆರೋಪ

ಪಂಚಾಯತ್‌ನಲ್ಲಿ ಪ್ರಭಾವ ಹೊಂದಿರುವ ವ್ಯಕ್ತಿಗಳಿಗೆ ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ಅನಧಿಕೃತ ವಹಿಸಲಾಗಿದೆ. ಯಾವುದೇ ಎಸ್ಟಿಮೇಟ್, ಎಂಜಿನಿಯರಿಂಗ್ ಪ್ಲಾನ್ ಇಲ್ಲದೇ ತಮಗಿಷ್ಟ ಬಂದಂತೆ ಕಾಮಗಾರಿ ಅನುಷ್ಠಾನ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಉಪಯೋಗಕ್ಕಿಂತ ಹೆಚ್ಚಾಗಿ ಅಪಾಯ ಎದುರಾಗಿದೆ ಎಂದು ಆರೋಪಿಸಿದ್ದಾರೆ.

ಇರುವ ರಸ್ತೆಗಳನ್ನು ಹಾಳು ಮಾಡಲಾಗುತ್ತಿದೆ. ಬ್ರಾಹ್ಮಣರ ಬೀದಿಯಲ್ಲಂತೂ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ABOUT THE AUTHOR

...view details