ಗಂಗಾವತಿ: ಕರ್ತವ್ಯ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಸಮಸ್ಯೆ, ಸೇವೆಗಳಿಗೆ ಸ್ಪಂದಿಸದ ನಗರಸಭೆಯ ಮೂರು ಅಧಿಕಾರಿಗಳ ವಿರುದ್ಧ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸುನಿಲ್ ಕುಮಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಕರ್ತವ್ಯ ನಿರ್ಲಕ್ಷ್ಯ... ನಗರಸಭೆಯ ಇಬ್ಬರು ಅಮಾನತು : ಒಬ್ಬರಿಗೆ ನೋಟೀಸ್ ಜಾರಿ - latest gangavati koppala news
ಕರ್ತವ್ಯ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಸಮಸ್ಯೆ, ಸೇವೆಗಳಿಗೆ ಸ್ಪಂದಿಸದ ನಗರಸಭೆಯ ಮೂರು ಅಧಿಕಾರಿಗಳ ವಿರುದ್ಧ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಕರ್ತವ್ಯ ನಿರ್ಲಕ್ಷ್ಯ....ನಗರಸಭೆಯ ಇಬ್ಬರು ಅಮಾನತು : ಒಬ್ಬರಿಗೆ ನೋಟೀಸ್ ಜಾರಿ
ವಿದ್ಯುತ್ ದೀಪ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಹಾಗೂ ಕಂದಾಯ ವಿಭಾಗದ ಬಸವರಾಜ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆದರೆ ಬಸವರಾಜ ಜಿಲ್ಲಾಧಿಕಾರಿಯ ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಆದೇಶಕ್ಕೆ ತಡೆ ತಂದಿದ್ದಾರೆ. ಕುಡಿಯುವ ನೀರು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರ ಗುರುರಾಜ್ ದಾಸನಾಳಗೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.