ಕರ್ನಾಟಕ

karnataka

ETV Bharat / state

ಮದ್ಯಪಾನ ಸಂಪೂರ್ಣ ನಿಷೇಧಿಸಿ; ಸಿಎಂಗೆ 4,665 ಪತ್ರ

ತಾಲೂಕಿನಲ್ಲಿ ಮದ್ಯಪಾನ ಸಂಪೂರ್ಣ ನಿಷೇಧಿಸಬೇಕೆಂದು ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಅಡಿಯಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಸದಸ್ಯರು ಸಿಎಂಗೆ ಪತ್ರ ಬರೆದಿದ್ದಾರೆ.

Kustagi
Kustagi

By

Published : Oct 21, 2020, 9:22 PM IST

ಕುಷ್ಟಗಿ (ಕೊಪ್ಪಳ): ಮದ್ಯಪಾನ ಸಂಪೂರ್ಣ ನಿಷೇಧಿಸಬೇಕೆಂದು ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಅಡಿಯಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಸದಸ್ಯರು, ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಮುರಳೀಧರ ಎಚ್.ಎಲ್ ಹೇಳಿದರು.

ಸಂಸ್ಥೆಯ ಕಛೇರಿಯಲ್ಲಿ ತಾಲೂಕಿನ ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಅಡಿಯಲ್ಲಿ ಸ್ತ್ರೀ ಶಕ್ತಿ ಸಂಘಟನೆ ಸದಸ್ಯರು ಬರೆದ ಪತ್ರಗಳನ್ನು ಸಂಸ್ಥೆಯ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಸಂಗ್ರಹಿಸಿದ್ದು, ಒಟ್ಟು 4,665 ಪತ್ರಗಳನ್ನು ಸಂಗ್ರಹಿದ್ದಾರೆ.

ಈ ಪತ್ರಗಳನ್ನು ಜನ ಜಾಗೃತಿ ಸಂಘಕ್ಕೆ ಹಸ್ತಾಂತರಿಸಲಾಗುತ್ತಿದ್ದು, ಶುಕ್ರವಾರ ಈ ಎಲ್ಲಾ ಪತ್ರಗಳನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕಿ ಮುಖ್ಯಮಂತ್ರಿಗಳಿಗೆ ರವಾನಿಸಲಾಗುತ್ತಿದೆ ಎಂದರು.

ಈ ವೇಳೆ ಜನಜಾಗೃತಿ ಸಂಘದ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಸದಸ್ಯ ಮಹಾಂತಯ್ಯ ಅರಳಿಮಠ, ವಿ.ವಿ. ಹಿರೇಮಠ, ರುದ್ರಪ್ಪ ಅಕ್ಕಿ, ಯೋಜನಾಧಿಕಾರಿ ವಿನಾಯಕ ನಾಯಕ ಸ್ವೀಕರಿಸಿದರು. ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಜರಿದ್ದರು.

ABOUT THE AUTHOR

...view details