ಗಂಗಾವತಿ:ರಾಜ್ಯದ ಐಟಿಐ ಕಾಲೇಜುಗಳಲ್ಲಿ ಸರ್ಕಾರ ಜಾರಿಗೆ ತರಲು ಚಿಂತಿಸಿರುವ ಆನ್ಲೈನ್ ಮಾದರಿಯ ಪರೀಕ್ಷಾ ವಿಧಾನವನ್ನು ಕೈಬಿಡಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೆಷನ್ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಆನ್ಲೈನ್ ಪರೀಕ್ಷಾ ಪದ್ಧತಿ ರದ್ದಪಡಿಸಲು ಆಗ್ರಹಿಸಿ ಎಐಡಿವೈಒ ಪ್ರತಿಭಟನೆ - ಎಐಡಿವೈಒ ಪ್ರತಿಭಟನೆ ಗಂಗಾವತಿ
ರಾಜ್ಯದ ಐಟಿಐ ಕಾಲೇಜುಗಳಲ್ಲಿ ಸರ್ಕಾರ ಜಾರಿಗೆ ತರಲು ಚಿಂತಿಸಿರುವ ಆನ್ಲೈನ್ ಮಾದರಿಯ ಪರೀಕ್ಷಾ ವಿಧಾನವನ್ನು ಕೈಬಿಡಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೆಷನ್ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ರು.
ಆನ್ಲೈನ್ ಪರೀಕ್ಷಾ ಪದ್ಧತಿ ರದ್ದಿಗೆ ಆಗ್ರಹಿಸಿ ಎಐಡಿವೈಒ ಪ್ರತಿಭಟನೆ
ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಮುಂದಿರುವ ಕೃಷ್ಣ ದೇವರಾಯ ವೃತ್ತದಲ್ಲಿ ಸಭೆ ಸೇರಿದ ಎಐಡಿವೈಒ ಸಂಘಟನೆಯ ಕಾರ್ಯಕರ್ತರು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನಾ ಜಾಥಾ ಮೂಲಕ ತಹಶಿಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಆನ್ಲೈನ್ ಪರೀಕ್ಷಾ ಪದ್ಧತಿ ಜಾರಿಯಿಂದ ಲಕ್ಷಾಂತರ ತರಬೇತಿದಾರರಿಗೆ ಗೊಂದಲ ಉಂಟಾಗುತ್ತದೆ. 2019ರ ಪರೀಕ್ಷಾ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಈಗಾಗಲೇ ಪೂರಕ ಪರೀಕ್ಷೆಯ ಅವಧಿಯೂ ಮುಗಿದಿದ್ದು, ವಿನಾಃಕಾರಣ ಸರ್ಕಾರ ಐಟಐ ತರಬೇತಿದಾರರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.