ಕರ್ನಾಟಕ

karnataka

ETV Bharat / state

ಉದ್ದೇಶಿತ ಆಟಿಕೆ ವಸ್ತು ತಯಾರಿಕಾ ಕ್ಲಸ್ಟರ್​ಗೆ ಸಚಿವ ಪಾಟೀಲ್ ಭೇಟಿ - agriculture minister b.c.patil

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬಳಿ ನಿರ್ಮಾಣ ಹಂತದ ಆಟಿಕೆ ವಸ್ತುಗಳ ತಯಾರಿಕ ಕ್ಲಸ್ಟರ್​ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿದರು.

agriculture minister b.c.patil visit to koppal
ತಯಾರಿಕಾ ಕ್ಲಸ್ಟರ್​ಗೆ ಸಚಿವ ಪಾಟೀಲ್ ಭೇಟಿ

By

Published : Sep 11, 2020, 7:54 PM IST

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾಣಾಪುರ ಬಳಿ ಸ್ಥಾಪನೆಯಾಗುತ್ತಿರುವ ಆಟಿಕೆ ವಸ್ತುಗಳ ತಯಾರಿಕಾ ಕ್ಲಸ್ಟರ್ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷಿ ಸಚಿವ ಬಿ.ಸಿ. ಪಾಟೀಲ್ ಭೇಟಿ ನೀಡಿದರು.

ತಯಾರಿಕಾ ಕ್ಲಸ್ಟರ್​ಗೆ ಸಚಿವ ಪಾಟೀಲ್ ಭೇಟಿ

ಯಲಬುರ್ಗಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದ ನಂತರ ಕ್ಲಸ್ಟರ್ ಸ್ಥಳಕ್ಕೆ ಭೇಟಿ‌ ನೀಡಿ, ಕಂಪನಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಆಟಿಕೆ ತಯಾರಿಕಾ ಕ್ಲಸ್ಟರ್ ಸ್ಥಾಪನೆಗೆ ಬೇಕಾದ ಭೂಮಿ, ಸೃಷ್ಠಿಯಾಗುವ ಉದ್ಯೋಗ ಸಂಖ್ಯೆ, ಉದ್ಯಮ ಯಾವಾಗ ಪ್ರಾರಂಭವಾಗುತ್ತದೆ ಎಂಬ ವಿಷಯ ಸೇರಿದಂತೆ ವಿವಿಧ ಮಾಹಿತಿಯನ್ನು ಕಂಪನಿಯ ಅಧಿಕಾರಿಗಳು ಸಚಿವ ಪಾಟೀಲ್ ಹಾಗೂ ಶಾಸಕ ಹಾಲಪ್ಪ ಆಚಾರ್​ಗೆ ಮಾಹಿತಿ ನೀಡಿದರು.

ಮುಂದಿನ ಜೂನ್, ಜುಲೈ ವೇಳೆಗೆ ಕಾರ್ಯಾರಂಭ ಮಾಡುವ ಕುರಿತಂತೆ ಕಂಪನಿಯ ಅಧಿಕಾರಿಗಳು ಹೇಳಿದರು. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

ABOUT THE AUTHOR

...view details