ಕುಷ್ಟಗಿ (ಕೊಪ್ಪಳ):ಜನತಾ ಕರ್ಫ್ಯೂ ಪರಿಣಾಮಕಾರಿಯಾಗದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಾಗಿ, ಲಾಕ್‌ಡೌನ್ ಅನಿವಾರ್ಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಕುಷ್ಟಗಿ ತಾಲೂಕಾಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿದ ಸಚಿವರು ಪರಿಶೀಲನೆ ನಡೆಸಿದರು. ಕುಷ್ಟಗಿಯ ಕೋವಿಡ್ ಕೇರ್ ಸೆಂಟರ್ನಲ್ಲಿ 42 ಬೆಡ್ಗಳಿದ್ದು, 36 ರೋಗಿಗಳು ದಾಖಲಾಗಿದ್ದಾರೆ. ಸದ್ಯ 6 ಬೆಡ್ಗಳು ಖಾಲಿ ಇವೆ. ಇಲ್ಲಿ ಇನ್ನೂ 20 ಬೆಡ್ಗಳನ್ನು ವಿಸ್ತರಿಸಲಾಗುತ್ತಿದೆ. ಅಲ್ಲದೆ, ಕುಷ್ಟಗಿ ವಿದ್ಯಾರ್ಥಿ ನಿಲಯಗಳಲ್ಲಿ 150, ತಾವರಗೇರಾದಲ್ಲಿ 30 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಕುಷ್ಟಗಿ ತಾಲೂಕಾಸ್ಪತ್ರೆಗೆ ಕೊಪ್ಪಳದಿಂದ ಪಿಜಿಷಿಯನ್ ನಿಯೋಜಿಸಲಾಗುತ್ತಿದೆ. ಅನಸ್ತೇಸಿಯಾ ವೈದ್ಯ ಅಮಾನತ್ತಾಗಿದ್ದು, ಪುನರ್ ನೇಮಕ ಮಾಡಿಕೊಳ್ಳಲಾಗುವುದು ಎಂದರು.